ಗದಗ : ಗದಗ ಜಿಲ್ಲೆ ನರಗುಂದದಲ್ಲಿ 5 ತಿಂಗಳ ಬಾಣಂತಿ ಸಾವಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಬಾಣಂತಿ ಪವಿತ್ರ (25) ಎನ್ನುವ ಬಾಣಂತಿಯ ಶವ ಪತ್ತೆಯಾಗಿದೆ. ಬಾಣಂತಿಯನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ.
ಯೋಧ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಈ ಒಂದು ಗಂಭೀರವಾದ ಆರೋಪ ಕೇಳಿ ಬಂದಿದ್ದು, ಗಂಡನ ಮನೆಗೆ ಬಂದ ಮೂರೇ ದಿನದಲ್ಲಿ ಪವಿತ್ರ ಕೊಲೆಯಾಗಿದೆ. ಪತಿ ಹರೀಶ್ ಕಲ್ಲಕುಟಿಕರ್ ಹಾಗೂ ಮಾವ ಮೂಕಪ್ಪ ಅತ್ತೆ ಸೋಮವ್ವ ವಿರುದ್ಧ ಮೃತಳ ಕುಟುಂಬಸ್ಥರು ಈ ಒಂದು ಆರೋಪ ಮಾಡುತ್ತಿದ್ದಾರೆ.ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು ಘಟನೆ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.