ಬೆಂಗಳೂರು : ಇತ್ತೀಚಿಗೆ ರಾಜ್ಯದಲ್ಲಿ ಸರ್ಕಾರ ಹಾಲಿನ ದರ, ವಿದ್ಯುತ್ ದರವನ್ನು ಏರಿಕೆ ಮಾಡಿತ್ತು. ಬಳಿಕ ಡೀಸೆಲ್ ದರ ಕೂಡ 2 ರೂಪಾಯಿ ಏರಿಕೆ ಮಾಡಿತ್ತು. ಹಾಗಾಗಿ ಇದೀಗ ಏಪ್ರಿಲ್ 14ರಂದು ಡೀಸೆಲ್ ದರ ಏರಿಕೆ ಖಂಡಿಸಿ ಲಾರಿ ಮಾಲೀಕರ ಸಂಘವು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ಹೌದು ಬೆಂಗಳೂರಿನಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿಕೆ ನೀಡಿದ್ದು, ಎಬ್ರಿಲ್ 14ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡುತ್ತೇವೆ. 6 ತಿಂಗಳ ಅಂತರದಲ್ಲಿ ಐದು ರೂಪಾಯಿ ಏರಿಕೆಯಾಗಿದೆ. ಸರ್ಕಾರವನ್ನು ಕರೆದು ಮಾತನಾಡುವ ಕೆಲಸ ಮಾಡಿಲ್ಲ. ರಾಜ್ಯ ಹೆದ್ದಾರಿಯಲ್ಲಿ ಕೂಡ ಶುಲ್ಕ ಸಂಗ್ರಹ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಲಾರಿ ಮುಷ್ಕರಕ್ಕೆ ಏರ್ಪೋರ್ಟ್ ಟ್ಯಾಕ್ಸಿಗಳು ಸಹ ಬೆಂಬಲ ನೀಡಿದ್ದು, ಡೀಸೆಲ್ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಲಾರಿ ಮಾಲೀಕರ ಸಂಘ ಆಕ್ರೋಶ ಹೊರಹಾಕಿದೆ. ಡೀಸೆಲ್ ದರ ಏರಿಕೆ ನಿರ್ಧಾರ ವಾಪಾಸ್ ಪಡೆಯಲು ಆಗ್ರಹಿಸಿದ್ದರು ಲಾರಿ ಮಾಲೀಕರ ಸಂಘದ ಒತ್ತಾಯಕ್ಕೆ ರಾಜ್ಯ ಸರ್ಕಾರ ಮಣಿದಿಲ್ಲ. ಹಾಗಾಗಿ ಏಪ್ರಿಲ್ 14 ರಂದು ಲಾರಿ ಮಾಲೀಕರ ಸಂಘ ಮುಷ್ಕರ ನಡೆಸಲು ನಿರ್ಧಾರ ಮಾಡಿದೆ.
ಅಲ್ಲದೇ ಅಂದು ಬೇರೆ ರಾಜ್ಯಗಳ ಲಾರಿಗಳು ರಾಜ್ಯಕ್ಕೆ ಪ್ರವೇಶವಿಲ್ಲ. ಏರ್ಪೋರ್ಟ್ ಟ್ಯಾಕ್ಸಿಗಳು ಕೂಡ ಅಂದು ಬಂದಿರಲಿದೆ. 5 ಲಕ್ಷ ಲಾರಿಗಳ ಸಂಚಾರ ಅಂದು ಬಂದ್ ಇರಲಿವೆ. ಜಲ್ಲಿಕಲ್ಲು,ಮರಳು ಸಾಗಾಟ ಮಾಡುವ ಲಾರಿಗಳು ಕೂಡ ಬಂದ್. ಗೂಡ್ಸ್ ವಾಹನಗಳು, ಅಕ್ಕಿ ಸಾಗಿಸುವ ಲಾರಿಗಳು, ಅಲ್ಲದೆ ಪೆಟ್ರೋಲ್ ಡೀಸೆಲ್ ಸಾಗಿಸುವ ಲಾರಿಗಳು ಕೂಡ ಬಂದಿರಲಿವೆ.