ರಾಮನಗರ : ರಾಮನಗರದಲ್ಲಿ ಇಂದು ಘೋರವಾದಂತಹ ದುರಂತ ನಡೆದಿದ್ದು, ಬಾಯ್ಲರ್ ಸ್ಪೋಟಗೊಂಡು ಐವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಈ ಒಂದು ಅವಘಡ ಸಂಭವಿಸಿದೆ.
ರಾಮನಗರದ ಆರ್ಬಿಟ್ ಪವರ್ ಕಂಪನಿಯಲ್ಲಿ ಬಾಯ್ಲರ್ ಸ್ಪೋಟವಾಗಿದೆ.ಉತ್ತರ ಭಾರತದ ಮೂಲದ ಅಮ್ಬ್ಲೇಶ್ ಹಾಗೂ ತರುಣ್, ಉಮೇಶ್, ಸಂತುನ್ ಹಾಗೂ ಲಖನ್ ಗೆ ಗಂಭೀರವಾದ ಗಾಯಗಳಾಗಿವೆ.ಐವರು ಗಾಯಾಳುಗಳ ಪೈಕಿ ಮೂವರ ಸ್ಥಿತಿ ಚಿಂತಾ ಜನಕವಾಗಿದೆ. ಗಾಯಾಳುಗಳಿಗೆ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಬಿಡದಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.