ವೆಲ್ಲಿಂಗ್ಟನ್ : ನ್ಯೂಜಿಲೆಂಡ್ ಹಾಗೂ ಫಿಲಿಫೈನ್ಸ್ ನಲ್ಲಿ ಇಂದು ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ನ್ಯೂಜಿಲೆಂಡ್‌ನ ನಾರ್ತ್ ಐಲ್ಯಾಂಡ್‌ನ ಪೂರ್ವ ಕರಾವಳಿಯಲ್ಲಿ ಗುರುವಾರ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ (GFZ) ತಿಳಿಸಿದೆ.
ಭೂಕಂಪವು 10 ಕಿಲೋಮೀಟರ್ (6.21 ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು GFZ ಹೇಳಿದೆ.
ಗುರುವಾರ ಫಿಲಿಪೈನ್ಸ್‌ನ ಲುಜಾನ್‌ನಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು GFZ ತಿಳಿಸಿದೆ. ಭೂಕಂಪವು 192 ಕಿಲೋಮೀಟರ್ (119.3 ಮೈಲುಗಳು) ಆಳದಲ್ಲಿ ಸಂಭವಿಸಿದೆ.