ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘಿ ಪ್ರಕರಣಗಳು ಹೆಚ್ಚುತ್ತಿದ್ದು ಇಂದು ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 487 ಕೇಸ್ ದಾಖಲಾಗಿವೆ ಎಂದು ತಿಳಿದುಬಂದಿದೆ.
ಹೌದು ಕರ್ನಾಟಕ ರಾಜ್ಯದಲ್ಲಿ ದಿನೇ ದಿನೇ ಡೆಂಘಿ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 487 ಡೇಂಗಿ ಕೇಸ್ ದಾಖಲಾಗಿವೆ. ಅಲ್ಲದೆ ಬೆಂಗಳೂರಿನಲ್ಲಿ 24 ಗಂಟೆಯಲ್ಲಿ 283 ಡೆಂಘಿ ಕೇಸ್ ದಾಖಲಾಗಿವೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 128 ಡೇಂಗಿ ಕೇಸ್ ಸಕ್ರಿಯವಾಗಿದ್ದು, ಒಟ್ಟು ಕೇಸ್ ಗಳ ಸಂಖ್ಯೆ 10449ಕ್ಕೆ ಏರಿಕೆಯಾಗಿವೆ.
ಈಗಾಗಲೇ ಆರೋಗ್ಯ ಇಲಾಖೆಯು ಡೆಂಗ್ಯೂ ಸೊಂಕನ್ನು ತಡೆಗಟ್ಟಲು ಸೂಕ್ತವಾದ ಕ್ರಮಗಳನ್ನು ಕೈಗೊಂಡಿದ್ದು ಅಲ್ಲದೆ ಜಿಲ್ಲಾವಾರು ಆರೋಗ್ಯ ಅಧಿಕಾರಿಗಳು ಮುಂಜಾಗೃತ ಕ್ರಮವಾಗಿ ರೋಗನ್ನು ತಡೆಗಟ್ಟಲು, ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಕೂಡ ನಡೆಸುತ್ತಿದ್ದಾರೆ.