ಗದಗ : ತನ್ನನ್ನು ಲವ್ ಮಾಡು, ಮದುವೆಯಾಗು ಅಂತಾ 47ರ ವರ್ಷ 19 ವಯಸ್ಸಿನ ಯುವತಿಯನ್ನು ಪೀಡಿಸಿದ ಆರೋಪ ಕೇಳಿಬಂದಿದ್ದು, ಇದರಿಂದ ಮನನೊಂದ ಯುವತಿಯು ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ವೀರಾಪೂರ ತಾಂಡಾದಲ್ಲಿ ನಡೆದಿದೆ.
ತಾಂಡಾದ ನಿವಾಸಿ ಕಿರಣ್ ಎನ್ನುವವನು ನೀಡಿದ ಕಿರುಕುಳಕ್ಕೆ ಯುವತಿಯ ವಂದನಾ ಎಂಬುವವರು ಫಿನಾಯಿಲ್ ಕುಡಿದು ಸಾವನಪ್ಪಿದ್ದಾರೆ.19 ವರ್ಷದ ವಂದನಾಗೆ 47 ವರ್ಷದ ಕಿರಣ ಎಂಬಾತ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ನಿತ್ಯ ಫೋನ್ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿದ್ದ, ಮದುವೆ ಆಗದೆ ಹೋದ್ರೆ ಫೋಟೋಸ್ ಗಳನ್ನು ಎಡಿಟ್ ಮಾಡಿ ಸೊಸಿಯಲ್ ಮೇಡಿಗೆ ಹಾಕುತ್ತೇನೆ ಹೆದರಿಸಿದ್ದಾನೆ ಎನ್ನಲಾಗುತ್ತಿದೆ.
ಇದರಿಂದ ಬೇಸತ್ತ ವಂದನಾ ಹಾಸ್ಟೆಲ್ ನಲ್ಲಿ ಪಿನಾಯಿಲ್ ಸೇವಿಸಿದ್ದಳು. ಆಕೆಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.ನಮ್ಮ ಕುಟುಂಬಕ್ಕೆ ಹಿರಿಯ ಮಗಳು ವಂದಾನ. ಗಂಡ ಇಲ್ಲವಾದರೂ ಸಹ ಕಷ್ಟಪಟ್ಟು ಮೂವರು ಮಕ್ಕಳನ್ನು ಚನ್ನಾಗಿ ಬೆಳೆಸಿದ್ದೆ. ಮೂವರ ಪೈಕಿ ಕಿರಿಯ ಮಗಳು ವಂದಾನ ಚೆನ್ನಾಗಿ ಓದಿ, ನೌಕರಿ ಮಾಡುತ್ತಾಳೆ.ದು ಕನಸು ಕಂಡಿದ್ದೆ. ಆದ್ರೆ ಈಗ ಕಿರಣ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಂದನಾ ತಾಯಿ ಕಣ್ಣೀರಿಟ್ಟಿದ್ದಾರೆ.