ಮ್ಯಾನ್ಮಾರ್ : ಮ್ಯಾನ್ಮಾರ್, ಬ್ಯಾಂಕಾಕ್ ನಲ್ಲಿ ನಿನ್ನೆ ಪ್ರಬಲವಾದ ಭೂಕಂಪ ಸಂಭವಿಸಿದ್ದು, ಇದುವರೆಗೂ 694 ಜನ ಸಾವನಪ್ಪಿದ್ದು, 1670ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ ಅಲ್ಲದೆ 70ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವುದು ವರದಿಯಾಗಿದೆ.
ಇನ್ನು ಬ್ಯಾಂಕಾಕ್ ಗೆ ಪ್ರವಾಸಕ್ಕೆ ಎಂದು ತೆರಳಿದ ಹಾವೇರಿ ಜಿಲ್ಲೆಯ ಐವರು ಹಾಗೂ ಕೆಲಸಕ್ಕೆ ಎಂದು ಅಲ್ಲೇ ಇರುವ ಹುಬ್ಬಳ್ಳಿಯ 42 ಜನರು ಸೇರಿದಂತೆ ಒಟ್ಟು ರಾಜ್ಯದ 47 ಜನರು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಹಾವೇರಿಯಿಂದ ಪ್ರವಾಸಕ್ಕೆ ತೆರಳಿದ್ದವರು ಸಫಾರಿ ವರ್ಲ್ಡ್ ನಲ್ಲಿ ಇರುವಾಗಲೇ ಭೂಕಂಪ ಆಗಿತ್ತು ಆದರೆ ನಮಗೆ ಯಾವುದೇ ರೀತಿಯಾದಂತಹ ಅಪಾಯವಾಗಿಲ್ಲ ಎಂದು ಅವರ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.