ವಿಜಯಪುರ : ಎದುರಿಗೆ ಬರುತ್ತಿದ್ದ ಶಾಲಾ ವಾಹನವನ್ನು ತಪ್ಪಿಸಲು ಕೆಎಸ್ಆರ್ಟಿಸಿ ಬಸ್ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸಿದ ಇನ್ನೊಂದು ಬಸ್ ಹಿಂಬದಿಯಿಂದ ಬಂದು ಆ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಸಲ್ಲಿದ್ದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 40 ಜನರಿಗೆ ಗಾಯವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನಲ್ಲಿ ನಡೆದಿದೆ.
ಇಂಡಿಯಿಂದ ಹಲಸಂಗಿ ಬತಗುಣಕಿ ಮಾರ್ಗವಾಗಿ ಚಡಚಣಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಗಳು ಎದುರಿನಿಂದ ಬಂದ ಶಾಲಾ ವಾಹನ ಡಿಕ್ಕಿ ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ. ಈ ವೇಳೆ ಮುಂದೆ ತೆರಳುತ್ತಿದ್ದ ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾನೆ. ಬಳಿಕ ಹಿಂಬದಿಯಲ್ಲಿ ಇದೇ ರಸ್ತೆಯಲ್ಲಿ ಬರುತ್ತಿದ್ದ ಇನ್ನೊಂದು ಬಸ್ ಚಾಲಕ ಸಹ ಬ್ರೇಕ್ ಹಾಕಲು ಯತ್ನಿಸಿದ್ದು, ಬಸ್ ನಿಯಂತ್ರಣಕ್ಕೆ ಸಿಗದೆ ಮುಂದಿನ ಬಸ್‌ಗೆ ಡಿಕ್ಕಿ ಹೊಡೆದಿದೆ.
‘ಗೃಹಲಕ್ಷ್ಮಿ’ ಯೋಜನೆ : ಇನ್ನು ‘8.20 ಲಕ್ಷ’ ಮಹಿಳೆಯರ ಖಾತೆಗೆ ನಗದು ವರ್ಗಾವಣೆ ಬಾಕಿ : ಲಕ್ಷ್ಮಿ ಹೆಬ್ಬಾಳ್ಕರ್
ಪರಿಣಾಮ ಬಸ್ ಗಳ ಮುಂಭಾಗ ಮತ್ತು ಹಿಂದಭಾಗ ಜಖಂಗೊಂಡಿವೆ. ಬಸ್ ಗಳಲ್ಲಿ ಚಡಚಣ ಪಟ್ಟಣಕ್ಕೆ ಪರೀಕ್ಷೆಗೆ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅವರಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು, ಎಂಟರಿಂದ ಹತ್ತು ಜನರಿಗೆ ಗಂಭೀರ ಗಾಯಗಳಾಗಿವೆ. ಇವರನ್ನ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜ್ಬೇಕಿಸ್ತಾನ್: ‘ಮೇಲ್ಛಾವಣಿ’ ಕುಸಿದು ಮೂವರು ಭಾರತೀಯ ಕಾರ್ಮಿಕರು ಸಾವು, 30 ಮಂದಿಗೆ ಗಾಯ