ರಾಮನಗರ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಹತ್ಯೆಗೈದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ನಡೆದಿದೆ.
ಹೌದು ಜುಲೈ 20 ರಂದು ತಾರೀಖಿನಂದು ಸಂಜೆ ಬಾಲಕಿಯ ಪೋಷಕರು ಎಲ್ಲೆಡೆ ತಮ್ಮ ಮಗಳನ್ನು ಹುಡುಕುತ್ತಿದ್ದರು. ಮನೆ ಅಕ್ಕ-ಪಕ್ಕ, ಅವಳು ಹೋಗುತ್ತಿದ್ದ ಜಾಗ, ಆಟವಾಡುತ್ತಿದ್ದ ಸ್ಥಳಗಳಲ್ಲಿ ಎಷ್ಟೇ ಹುಡುಕಿದರೂ ತಮ್ಮ ಮಗಳು ಪತ್ತೆ ಆಗಲಿಲ್ಲ. ಕೂಡಲೇ ಮಾಗಡಿ ಪೊಲೀಸ್ ಠಾಣೆಗೆ ಹೋಗಿ ತಮ್ಮ ಮಗಳು ನಾಪತ್ತೆ ಆಗಿರುವ ಕುರಿತು ಪ್ರಕರಣ ದಾಖಲು ಮಾಡಿದ್ದಾರೆ.
ಮಗಳನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂಬ ವಿಚಾರ ಪೊಲೀಸರು ಪೋಷಕರಿಗೆ ತಿಳಿಸುತ್ತಿದ್ದಂತೆ ತಂದೆ-ತಾಯಿಗೆ ಕಂಗಾಲಾಗಿದ್ದರು. ಆಗಾಗ ತಮ್ಮ ಮನೆಗೆ ಬಂದು ಹೋಗುತ್ತಿದ್ದ ಬೆಂಗಳೂರಿನ ಆ ಸಂಬಂಧಿ ಇರ್ಫಾನ್, ಆವತ್ತು ಕೂಡ ತಮ್ಮ ಮನೆಗೆ ಬಂದಿದ್ದ. ಮನೆಯಲ್ಲಿದ್ದ ಮಕ್ಕಳನ್ನು ಅಂಗಡಿಗೆ ಕರೆದುಕೊಂಡು ಹೋಗಿ, ಚಾಕಲೇಟ್ ಕೊಡಿಸಿದ್ದ. ಬಳಿಕ ವಾಪಾಸ್ ತೆರಳಿದ್ದ ಆರೋಪಿ 4 ವರ್ಷದ ಬಾಲಕಿಯನ್ನೂ ತನ್ನ ದ್ವಿಚಕ್ರವಾಹನದಲ್ಲಿ ಕರೆದುಕೊಂಡು ಹೋಗಿದ್ದ.
ಮೂವರು ಮಕ್ಕಳ ಪೈಕಿ 4 ವರ್ಷದ ಬಾಲಕಿ ಯಾವತ್ತೂ ತನ್ನ ತಂದೆ-ತಾಯಿ ಬಿಟ್ಟು ಒಂದು ದಿನ ಇದ್ದವಳಲ್ಲ. ಅಂತಹದರಲ್ಲೂ ಇಡೀ ರಾತ್ರಿ ತಮ್ಮ ಮಗಳು ಎಲ್ಲಿ ಹೋದಳೋ ಎಂಬ ಆತಂಕದಲ್ಲಿ ರಾತ್ರಿ ಕಳೆದ ಪೋಷಕರಿಗೆ ಬೆಳಗಾಗುವುದರೊಳಗೆ ತಮ್ಮ ಮಗಳು ಕಳೆದು ಹೋಗಿಲ್ಲ, ಬದಲಿಗೆ ಕಿಡ್ನ್ಯಾಪ್ ಆಗಿದ್ದಾಳೆ ಎಂಬ ವಿಚಾರ ಬಯಲಿಗೆ ಬಂದಿತ್ತು.
ಆರೋಪಿಯ ಸುಳಿವು ಸಿಕ್ಕ ಕಾರಣ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ. ಆದರೆ ಸುಳ್ಳು ಹೇಳಿದ ಆರೋಪಿ ನಂತರ ಪೋಲೀಸರ ಭಾಷೆಯಲ್ಲಿ ಕೇಳಿದಾಗ ನಿಜ ಬಾಯಿ ಬಿಟ್ಟಿದ್ದಾನೆ.ಸಧ್ಯ ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ಜೊತೆಗೆ ಇಡೀ ತಾಲೂಕಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೂಡ ಮಾಡಲಾಗಿದೆ.