ಬೆಂಗಳೂರು : ಬೆಂಗಳೂರಿನ ನಾಲ್ಕು ವರ್ಷದ ಬಾಲಕಿಯ ಅಮೇರಿಕನ್ ಪಿಟ್ ಬುಲ್ ಭೀಕರವಾಗಿ ದಾಳಿ ನಡೆಸಿರುವ ಘಟನೆ ನಡೆದಿದ್ದು ಅಮೆರಿಕನ್ ಪಿಟ್ ಬುಲ್ ನಾಯಿಂದ ಬಾಲಕಿ ಮೇಲೆ ಭೀಕರ ದಾಳಿ ನಡೆದಿದೆ.
ಜನವರಿ 13 ರಂದು ಬೆಂಗಳೂರಿನ ಸಂಜಯ್ ನಗರದಲ್ಲಿ ಘಟನೆ ನಡೆದಿದೆ.ನೇಪಾಳ ಮೂಲದ ಸಾನಿಯಾಗೆ ಪಿಟ್ ಬುಲ್ ನಾಯಿ ದಾಳಿ ಮಾಡಿದರಿಂದ 4 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ವೇಳೆ ತಕ್ಷಣ ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಾಲೀಕರ ಮನೆಗೆ ಮಗಳನ್ನು ಕರೆದೊಯ್ದಿದ್ದಾಗ ಬಾಲಕಿಯ ಮೇಲೆ ನಾಯಿ ದಾಳಿ ನಡೆಸಿದೆ.ಎಂದು ತಿಳಿದುಬಂದಿದ್ದು, ಈ ಕುರಿತಂತೆ ಪೊಲೀಸರಿಂದ ಬಾಲಕಿ ತಂದೆ ಸುನಿಲ್ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಲೀಕರು ವಿರುದ್ಧ ತಂದೆ ಸುನಿಲ್ ದೂರು ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ನನ್ನ ಮಗಳ ಮೇಲೆ ಅವ್ರ ನಾಯಿ ದಾಳಿ ಮಾಡಿದೆ ಈಗ ಅವರೇ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಒಂದು ವೇಳೆ ದೂರು ಕೊಟ್ಟರೆ ಮುಂದೆ ನನ್ನ ಮಗಳ ಗತಿ ಏನೂ? ನನ್ನ ಬಳಿ ಚಿಕಿತ್ಸೆ ಕೊಡಿಸುವಷ್ಟು ಹಣವಿಲ್ಲ ಎಂದು ಈ ವೇಳೆ ತಂದೆ ಸುನಿಲ್ ತಿಳಿಸಿದ್ದಾರೆ.