ಬೆಂಗಳೂರು : ಬೆಂಗಳೂರಿನಲ್ಲಿ ರಾಟ್ ವಿಲ್ಲರ್ ನಾಯಿಯೊಂದು 4 ವರ್ಷದ ಮಗುವಿನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದೆ. ಪುಟ್ಟ ಕಂದಮ್ಮನ ಮೇಲೆ ನಾಯಿಂದ ಭೀಕರವಾದ ದಾಳಿ ನಡೆದಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ .
ಹೌದು 4 ವರ್ಷದ ಮಗುವಿನ ತಲೆಯ ಭಾಗಕ್ಕೆ ನಾಯಿ ಕಚ್ಚಿದೆ. ಇಂದ್ರಾ ನಗರದ ಗಣೇಶ ಟೆಂಪಲ್ ಬಳಿ ಈ ಒಂದು ಘಟನೆ ನಡೆದಿದೆ. ಮಗು ರಕ್ಷಣೆ ಮಾಡಿದವರ ಮೇಲು ಕೂಡ ನಾಯಿ ಭೀಕರ ದಾಳಿ ನಡೆಸಿದೆ. ನಾಯಿ ದಾಳಿ ಮಾಡಿದ ವೇಳೆ, ಮಗು ಜೋರಾಗಿ ಕಿರುಚಿಕೊಂಡಿದೆ ಈ ವೇಳೆ ಮಗುವಿನ ತಂದೆ ಮಗುವಿನ ರಕ್ಷಣೆಗೆ ಧಾವಿಸಿದಾಗ ಆತನ ಮೇಲೂ ಕೂಡ ನಾಯಿ ದಾಳಿ ಮಾಡಿದೆ ಘಟನೆ ಕುರಿತು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.