ಬೆಂಗಳೂರು : ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 337 ತಜ್ಞ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ಬರ್ತಿ ಮಾಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಬೇಳೂರು ಗೋಪಾಲ ಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದವರು ಇಲಾಖೆಯಲ್ಲಿ 337 ತಜ್ಞರ ಹುದ್ದೆ ಖಾಲಿ ಇದೆ ತಾತ್ಕಾಲಿಕವಾಗಿ ಈಗ ಗುತ್ತಿಗೆ ಆಧಾರದಲ್ಲಿ ಆ ಹುದ್ದೆಗಳನ್ನು ಬರ್ತಿ ಮಾಡಲು ತೀರ್ಮಾನನೇ ಮಾಡಲಾಗಿದೆ ಈ ಪೈಕಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯ ಸ್ಥಾನ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಗೊಳ್ಳುವ ಪ್ರಕ್ರಿಯೆ ಚಲನೆಯಲ್ಲಿದೆ ಎಂದರು.
ಇದೇ ವೇಳೆ ಕಾಂಗ್ರೆಸ್ ಸದಸ್ಯ ಸಿಎಸ್ ಬಾಲಕೃಷ್ಣ ಅವರು ಕೇಳಿದ ನಮ್ಮ ಕ್ಷೇತ್ರದ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯ ಒದಗಿಸಬೇಕೆಂಬ ಪ್ರಶ್ನೆಗೆ ಉತ್ತರಿಸಿದ ಅವರು ಆಸ್ಪತ್ರೆಯ ನಿರ್ವಹಣಾ ಅನುದಾನ ಹೆಚ್ಚಳಕ್ಕೆ ಸಿಎಂ ಜೊತೆಗೆ ನಾನು ಮಾತನಾಡಿದ್ದೇನೆ. ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ಪತ್ರೆಗಳಿಗೆ ವರ್ಷಕ್ಕೆ 25 ಕೋಟಿ ರೂ ನಿರ್ವಹಣಾ ಅನುದಾನ ನೀಡಲಾಗುತ್ತಿದೆ ಇದು ಸಾಕಾಗುವುದಿಲ್ಲ ಇದನ್ನು ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಮಾತನಾಡಿದ್ದೇನೆ ಆಸ್ಪತ್ರೆ ಎಲ್ಲಾ ಸೌಕರ್ಯಗಳು ಸಮರ್ಪಕವಾಗಿರಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ರಾಜ್ಯ ಸರ್ಕಾರದಿಂದ ‘ಸಮುದಾಯ ಭವನ’ ನಿರ್ಮಾಮಕ್ಕಾಗಿ ಅನುದಾನ ಮಂಜೂರು ಮಾಡಿ ಆದೇಶ
BIG NEWS: ‘ಕಾನೂನು ಪದವಿ ಪ್ರಮಾಣ ಪತ್ರ’ ಪ್ರಶ್ನಿಸುವ ಹಕ್ಕು ‘ವಕೀಲರ ಪರಿಷತ್’ಗೆ ಇಲ್ಲ – ಹೈಕೋರ್ಟ್ ಮಹತ್ವದ ತೀರ್ಪು