ದಾವಣಗೆರೆ : ದಾವಣಗೆರೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ತ್ರಿಚಕ್ರ ಬೈಕ್ ಹಾಗೂ ಕಾರಿನ ನಡುವೆ ಬೀಖರವಾದ ಅಪಘಾತ ಸಂಭವಿಸಿದ್ದು ತ್ರಿಚಕ್ರ ವಾಹನದಲ್ಲಿದ್ದ 3 ವರ್ಷದ ಮಗು, ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದು, ದಂಪತಿಗಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ದಾವಣಗೆರೆ ತಾಲೂಕಿನಲ್ಲಿ ನಡೆದಿದೆ.
ದಾವಣಗೆರೆ ತಾಲೂಕಿನ ಗಾಂಧಿನಗರ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ತ್ರಿಚಕ್ರ ಬೈಕ್ ನಲ್ಲಿ ಪತ್ನಿ, ತಂದೆ ಹಾಗು ಪುತ್ರನ ಜೊತೆಗೆ ವಿಕಲಚೇತನ ಬರುತ್ತಿದ್ದ. ಈ ವೇಳೆ ಜಗಳೂರು ಕಡೆಯಿಂದ ಬರುತ್ತಿದ್ದ ತ್ರಿಚಕ್ರ ಬೈಕಿಗೆ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.