ರಾಮನಗರ : ಚಿಕ್ಕ ಮಕ್ಕಳನ್ನು ಪೋಷಕರಾದವರು ಹೊರಗಡೆ ಬಿಡಲೆಬಾರದು. ಅಕಸ್ಮಾತ್ ಅವರನ್ನು ಹೊರಗಡೆ ಬಿಟ್ಟರೆ ಅವರ ರಕ್ಷಣೆ ಮಾಡಲೇಬೇಕು. ಇಲ್ಲವಾದರೆ ಅನಾಹುತ ಸಂಭಾವಿಸುವ ಸಾಧ್ಯತೆ ಇರುತ್ತದೆ. ಇದೀಗ ಕನಕಪುರದಲ್ಲಿ ಘೋರ ದುರಂತವೊಂದು ನಡೆದಿದ್ದು, ಮನೆಯ ಮುಂದೆ ಅಥವಾಡುತ್ತಿದ್ದ 3ವರ್ಷದ ಮಗು ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದೆ.
ಹೌದು ಮನೆ ಮುಂದೆ ಆಡುತ್ತಿದ್ದ 3 ವರ್ಷದ ಬಾಲಕ, ಗ್ರಾಮದ ಸಿಂಧು ಮತ್ತು ಶ್ರೀನಿವಾಸ್ ಪುತ್ರ ಪ್ರದ್ವಿನ್ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಅಡಕೆ ಹಳ್ಳ ಗ್ರಾಮದಲ್ಲಿ ಸಂಭವಿಸಿದೆ.ಹೆರಿಗೆಗೆಂದು ಸಿಂಧು ತವರು ಮನೆಗೆ ಬಂದಿದ್ದು, 2ನೇ ಮಗು ವಿನ ನಿರೀಕ್ಷೆಯಲ್ಲಿರುವಾಗ ಈ ದುರ್ಘಟನೆ ಸಂಭವಿಸಿದೆ.