ದಾವಣಗೆರೆ : ರಸ್ತೆಯಲ್ಲಿ ಹಸು ಅಡ್ಡ ಬಂದಿದ್ದ ಕಾರಣ ಅದನ್ನು ಉಳಿಸಲು ಹೋಗಿ ಬೋಲೇರೋ ವಾಹನ ಒಂದು ಪಾರ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಸಮೀಪದ ಚಿನ್ನಿಕಟ್ಟಿ ಎಂಬಲ್ಲಿ ನಡೆದಿದೆ.
ಅಪಘಾತದಲ್ಲಿ ಚಂದನ ಕೆರೆಯ ನಾಗರಾಜ್ (38) ಗೌತಮ್ (17) ಹಾಗೂ ಮಂಜುನಾಥ್(45) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.ದಾವಣಗೆರೆ ಜಿಲ್ಲೆ, ನ್ಯಾಮತಿ ತಾಲೂಕಿನ ಸವಳಂಗ ದಲ್ಲಿ ಬೊಲೆರೋ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ್ದಾರೆ.
ಹಸು ಅಡ್ಡ ಬಂದಿದ್ದಕ್ಕೆ ನಿಯಂತ್ರಣ ತಪ್ಪಿ ಬೋಲೇರೋ ವಾಹನ ಪಲ್ಟಿಯಾಗಿದೆ. ಈ ವೇಳೆ ವಾಹನದಲ್ಲಿದ್ದ ನಾಗರಾಜ್ ಗೌತಮ್ ಹಾಗೂ ಮಂಜುನಾಥ್ ದುರಂತ ಸಾವನ್ನು ಕಂಡಿದ್ದಾರೆ.ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಚಂದನಕೆರೆಯಲ್ಲಿ ಅಡಿಕೆ ಕೊಯ್ಲು ಮುಗಿಸಿ ವಾಪಸ್ ಆಗುವಾಗ ಈ ದುರಂತ ಸಂಭವಿಸಿದೆ 6 ಜನರಿಗೆ ಗಂಭೀರವಾಗಿ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಕುರಿತಂತೆ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.