ಕೊಪ್ಪಳ : ಕಳೆದ ಎರಡು ದಿನಗಳ ಹಿಂದೆ ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಂಚರಿಸುತ್ತಿದ್ದ ರಸ್ತೆ ಮಾರ್ಗದಲ್ಲಿ ವಿರುದ್ಧವಾಗಿ ಶಾಸಕ ಜನಾರ್ಧನ್ ರೆಡ್ಡಿ ಅವರು ಕಾರು ಎದುರಾಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜನಾರ್ಧನ್ ರೆಡ್ಡಿ ಕಾರು ಚಾಲಕನ ಮೇಲೆ FIR ದಾಖಲಾಗಿತ್ತು. ಇಂದು ಶಾಸಕ ಜನಾರ್ಧನ್ ರೆಡ್ಡಿ ಅವರ ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಹೌದು ಶಾಸಕ ಜನಾರ್ದನ ರೆಡ್ಡಿಗೆ ಸೇರಿದ ರೇಂಜ್ ರೋವರ್ ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ಸಂಚಾರಿ ಠಾಣೆ ಪೊಲೀಸರಿಂದ ಜನಾರ್ಧನ್ ರೆಡ್ಡಿ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಕಾರು ಜಪ್ತಿ ಮಾಡಿ ಗಂಗಾವತಿಗೆ ಪೊಲೀಸರು ತಂದಿದ್ದಾರೆ. ಅಕ್ಟೋಬರ್ 5ರಂದು ಸಿಎಂ ತೆರಳುತ್ತಿದ್ದ ವೇಳೆ ನಿಯಮ ಉಲ್ಲಂಘಹಿಸಲಾಗಿತ್ತು.
ರಾಯಚೂರಿನಿಂದ ಜಿಂದಾಲ್ ಏರ್ ಪೋರ್ಟ್ ಗೆ ಸಿಎಂ ಸಿದ್ದರಾಮಯ್ಯ ಅವರು ತೆರಳುತ್ತಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಕಾನ್ವೆಗೆ ಎದುರಾಗಿ ಜನಾರ್ಧನ್ ರೆಡ್ಡಿ ಕಾರು ಚಲಾಯಿಸಿದ್ದರು.ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 3 ಕಾರುಗಳ ಮೇಲೆ FIR ದಾಖಲಾಗಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಬಳಸುವ ರೇಂಜರ್ ರೋವರ್ ಕಾರು, ಸ್ಕಾರ್ಪಿಯೋ ಕಾರು ಹಾಗೂ ಫಾರ್ಚುನರ್ ಕಾರನ್ನು ಪೋಲಿಸರು ಜಪ್ತಿ ಮಾಡಿಕೊಂಡಿದ್ದಾರೆ.
ಘಟನೆ ಹಿನ್ನೆಲೆ?
ಅಕ್ಟೊಬರ್ 5 ರಂದು ರಾಯಚೂರಿನಿಂದ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಸಿಎಂ ಸಿದ್ದರಾಮಯ್ಯ ಇದ್ದ ವಾಹನ ತೆರಳುತ್ತಿದ್ದಾಗ ಸ್ವತಃ ಶಾಸಕ ಗಾಲಿ ಜನಾರ್ದನ ರೆಡ್ಡಿ ಪ್ರಯಾಣಿಸುತ್ತಿದ್ದ ಕಾರು ಕೂಡ ವಿರುದ್ಧ ದಿಕ್ಕಿನಲ್ಲಿ ಚಲಿಸಿರುವಂತಹ ಘಟನೆ ಜಿಲ್ಲೆಯ ಗಂಗಾವತಿ ನಗರದ ಸಿಬಿಎಸ್ ವೃತ್ತದಲ್ಲಿ ಘಟನೆ ನಡೆದಿತ್ತು. ಸಿಎಂ ಬಂದ ಹಿನ್ನಲ್ಲೆ ಜೀರೊ ಟ್ರಾಪಿಕ್ ಮಾಡಲಾಗಿತ್ತು.
ಸುಮಾರು 20 ನಿಮಿಷ ಟ್ರಾಫಿಕ್ ಜಾಮ್ ಆಗಿದ್ದರಿಂದ ಡಿವೈಡರ್ ದಾಟಿ ಒನ್ ವೇನಲ್ಲಿ ವಿರುದ್ಧ ದಿಕ್ಕಿಗೆ ರೆಡ್ಡಿ ಚಾಲಕ ಕಾರು ಚಲಾಯಿಸಿದ್ದಾರೆ. ಸ್ವಲ್ಪ ವ್ಯತ್ಯಾಸ ಆಗಿದ್ದರೂ ಭಾರಿ ಅನಾಹುತ ನಡೆಯುತ್ತಿತ್ತು. ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.