ಗುಜರಾತ್ : ಗುಜರಾತಿನ ಸೌರಾಷ್ಟ್ರದ ಹಲವಡೆ ಲಘು ಭೂಕಂಪ ಸಂಭವಿಸಿದೆ. ಇಂದು ಮುಂಜಾನೆ ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ.
ಗಾಂಧಿನಗರದಲ್ಲಿರುವ ಭೂಕಂಪನ ಸಂಶೋಧನಾ ಸಂಸ್ಥೆ (ಐಎಸ್‌ಆರ್) ಪ್ರಕಾರ, ಭಾರತೀಯ ಕಾಲಮಾನ ಬೆಳಗಿನ ಜಾವ 3.06 ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಭೂಕಂಪದ ಕೇಂದ್ರಬಿಂದು ಸೌರಾಷ್ಟ್ರದ ತಲಾಲಾದಿಂದ 15 ಕಿ.ಮೀ ಈಶಾನ್ಯ (NNE) ದಲ್ಲಿ, 21.188°N ಅಕ್ಷಾಂಶ ಮತ್ತು 70.546°E ರೇಖಾಂಶದಲ್ಲಿತ್ತು. ಇಲ್ಲಿಯವರೆಗೆ ಯಾವುದೇ ಹಾನಿ ಅಥವಾ ಸಾವುನೋವುಗಳ ವರದಿಯಾಗಿಲ್ಲ.








