ತಾಷ್ಕೆಂಟ್ : ಭಾರತದ ಮರಿಯನ್ ಬಯೋಟೆಕ್ ತಯಾರಿಸಿದ ಕಲುಷಿತ ಕೆಮ್ಮಿನ ಸಿರಪ್ನಿಂದ 68 ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಉಜ್ಬೇಕಿಸ್ತಾನದ ನ್ಯಾಯಾಲಯವು ಆರು ತಿಂಗಳ ಸುದೀರ್ಘ ವಿಚಾರಣೆಯ ನಂತರ ಸೋಮವಾರ 23 ಮಂದಿಗೆ ಜೈಲು ಶಿಕ್ಷೆ ವಿಧಿಸಿದೆ.
ಮಧ್ಯ ಏಷ್ಯಾದ ರಾಷ್ಟ್ರವು ಈ ಹಿಂದೆ ಔಷಧಿಗಳಿಗೆ ಸಂಬಂಧಿಸಿದ 65 ಸಾವುಗಳನ್ನ ವರದಿ ಮಾಡಿತ್ತು. ಇನ್ನು ಕಳೆದ ತಿಂಗಳು ತಾಷ್ಕೆಂಟ್ ನಗರದ ನ್ಯಾಯಾಲಯದ ಪ್ರಾಸಿಕ್ಯೂಟರ್ಗಳು ಸಾವಿನ ಸಂಖ್ಯೆಯನ್ನ ನವೀಕರಿಸಿದರು ಮತ್ತು ವಿಚಾರಣೆಯ ಸಮಯದಲ್ಲಿ ಇನ್ನೂ ಇಬ್ಬರ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಹೇಳಿದರು.
ಒಬ್ಬ ಭಾರತೀಯ ಪ್ರಜೆ ಸೇರಿದಂತೆ ಪ್ರತಿವಾದಿಗಳು ಎರಡರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನ ವಿಧಿಸಲಾಗಿದೆ. ತೆರಿಗೆ ವಂಚನೆ, ಕಳಪೆ ಗುಣಮಟ್ಟದ ಅಥವಾ ನಕಲಿ ಔಷಧಿಗಳ ಮಾರಾಟ, ಕಚೇರಿ ದುರುಪಯೋಗ, ನಿರ್ಲಕ್ಷ್ಯ, ಫೋರ್ಜರಿ ಮತ್ತು ಲಂಚದ ಆರೋಪಗಳಲ್ಲಿ ಅವರು ತಪ್ಪಿತಸ್ಥರು ಎಂದು ಕಂಡುಬಂದಿದೆ.
ಉಜ್ಬೇಕಿಸ್ತಾನದಲ್ಲಿ ಭಾರತದ ಮರಿಯನ್ ಬಯೋಟೆಕ್ ಉತ್ಪಾದಿಸಿದ ಔಷಧಿಗಳನ್ನ ಮಾರಾಟ ಮಾಡುವ ಖುರಾಮಾಕ್ಸ್ ಮೆಡಿಕಲ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಸಿಂಗ್ ರಾಘವೇಂದ್ರ ಪ್ರತಾರ್ ಅವರಿಗೆ 20 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ವಿಧಿಸಲಾಗಿದೆ.
ಯುವ ಜನರೇ ಎಚ್ಚರ ; ‘ಡೇಟಿಂಗ್ ಅಪ್ಲಿಕೇಶನ್’ ನಂಬಿ ಮೋಸ ಹೋಗ್ಬೇಡಿ, ಬಳಸೋ ಮುನ್ನ ಈ ಸುದ್ದಿ ಓದಿ
‘ರಾಜ್ಯ ಸರ್ಕಾರ’ದಿಂದ ‘ಪೊಲೀಸ್ ಸಿಬ್ಬಂದಿ’ಗಳ ‘ಅಂತರ್ ಜಿಲ್ಲಾ ವರ್ಗಾವಣೆ’ ಗ್ರೀನ್ ಸಿಗ್ನಲ್