ಬೆಳಗಾವಿ : ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಿ ಜಾರಿ ಆಯ್ತು ಆದರೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಪಕ್ಷಗಳು ಪಟ್ಟು ಬಿಡದೆ ಗೃಹಲಕ್ಷ್ಮಿ ಹಣ ಹಾಕದೆ ರಾಜ್ಯದ ಜನರಿಗೆ ಸರ್ಕಾರ ಮೋಸ ಮಾಡಿದೆ ಎಂದು ಆರೋಪಿಸಿವೆ. ಇದರ ಬೆನ್ನಲ್ಲೇ ಸಚಿವೆ ಹೆಬ್ಬಾಳಕರ್ ಕೂಡ ಹೌದು ಎರಡು ತಿಂಗಳ ಹಣ ಗೃಹಲಕ್ಷ್ಮಿಯರ ಖಾತೆಗೆ ಜಮೆಯಾಗಿಲ್ಲ ಎಂದು ಸತ್ಯ ಒಪ್ಪಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎರಡು ತಿಂಗಳು ವರಲಕ್ಷ್ಮಿ ಹಣ ಜಮೆ ಆಗಿಲ್ಲ ಎಂದು ಸದನದಲ್ಲಿ ಸತ್ಯ ಒಪ್ಪಿಕೊಂಡಿದ್ದಾರೆ. ಹಣ ಖಾತೆ ಜಮೆ ಆಗದೆ ಇರುವುದರ ಕುರಿತು ಇವತ್ತು ಸದನದಲ್ಲಿ ಚರ್ಚೆ ಆಯಿತು. ಈ ವೇಳೆ ಲಕ್ಷ್ಮಿ ಬಾಳ್ಕರ್ ಎರಡು ತಿಂಗಳ ಹಣ ಜಮೆ ಆಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ನಾನು ಸದನಕ್ಕೆ ತಪ್ಪು ಮಾಹಿತಿ ನೀಡುವ ಉದ್ದೇಶ ಇರಲಿಲ್ಲ ಆದರೆ ನಾನು ಹೋಗಿ ಪರಿಶೀಲನೆ ಮಾಡಿದಾಗ ಎರಡು ತಿಂಗಳು ಹೆಚ್ಚು ಕಡಿಮೆ ಆಗಿದೆ ಎಂದು ಗೊತ್ತಾಗಿದೆ. ಅದನ್ನು ಮುಂದಿನ ದಿನಗಳಲ್ಲಿ ಸರಿ ಮಾಡುತ್ತೇನೆ. ನನ್ನ ಮಾತಿನಿಂದ ಯಾರಿಗಾದರು ಭಾವನೆಗೆ ಧಕ್ಕೆಯಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು.








