ತುಮಕೂರು : ವೈದ್ಯರು ಪೆಂಟಾ 1 ಲಸಿಕೆ ನೀಡಿದ್ದರಿಂದ 2 ತಿಂಗಳು ಮಗು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸಿಂಗನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.
ಎರಡುವರೆ ತಿಂಗಳ ಮಗುವಿಗೆ ಪೆಂಟಾ 1 ಲಸಿಕೆ ನೀಡಲಾಗಿತ್ತು. ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಲಸಿಕೆ ಕೊಡಿಸಲಾಗಿತ್ತು. ಮಗುವಿಗೆ ಆಸ್ಪತ್ರೆಯ ವೈದ್ಯರು ಒಟ್ಟಿಗೆ ಮೂರು ಇಂಜೆಕ್ಷನ್ ಗಳನ್ನು ನೀಡಿದ್ದರು. ಹಾಗಾಗಿ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮಗು ಸಾವನ್ನಪ್ಪಿದೆ.
ಚಿಕ್ಕಮ್ಮ ಮುರಳಿ ದಬ್ಬತಿಯ ಗಂಡು ಮಗು ಎಂದು ಬೆಳಗ್ಗೆ ಸಾವನಪ್ಪಿದೆ. ವೈದ್ಯರ ಎಡವಟ್ಟಿನಿಂದಲೇ ಮಗು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ ಘಟನೆ ಕುರಿತು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.