ಬೆಂಗಳೂರು : ಬೆಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು ಬಂಡಿಪಾಳ್ಯದ ಮನೆಯಲ್ಲಿದ್ದ 2.5 ಕೋಟಿ ಮೌಲ್ಯದ ಡ್ರಗ್ಸ್ ಇದೀಗ ಜಪ್ತಿ ಮಾಡಿದ್ದಾರೆ. ಓರ್ವ ವಿದೇಶ ಪ್ರಜೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನೈಜೀರಿಯಾ ಮೂಲದ ಒಕೋಕೆ ಕ್ರಿಸ್ತಫಾರ್ ಒಕೆಡೀಲ್, ಹಾಗೂ ತಮಿಳುನಾಡಿನ ನವೀನ್ ರಾಜ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳದ ಕಾರ್ಯಾಚರಣೆ ನಡೆಸಿದ್ದು ಬಂಡಿಪಾಳ್ಯದ ನವೀನ್ ರಾಜ್ ಮನೆಯಲ್ಲಿ ಡ್ರಗ್ಸ್ ಜತ್ತಿ ಮಾಡಲಾಗಿದೆ. ಡಾರ್ಕ್ ವೆಬ್ ಮೂಲಕ ಡ್ರಿಕ್ಸ್ ತಂದು ನವೀನ್ ಮಾರಾಟ ಮಾಡುತ್ತಿದ್ದ. ಸ್ನೇಹಿತರಿಂದ ತರಿಸಿಕೊಂಡು ವಿದೇಶಿ ಪ್ರಜೆ ಮಾರಾಟ ಮಾಡುತ್ತಿದ್ದ ಸ್ಥಳೀಯರು ಮತ್ತು ಐಟಿಬಿಟಿ ಉದ್ಯೋಗಗಳು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು.ಈ ಹಿಂದೆಯೂ ಕೂಡ ಎರಡು ಬಾರಿ ಒಕ್ಕೋಕೆ ಕ್ರಿಸ್ಟಾಫರ್ ಅರೆಸ್ಟ್ ಆಗಿದ್ದ ಬೇಲ್ ಮೇಲೆ ಹೊರಗಡೆ ಬಂದು ಮತ್ತೆ ಅದೇ ಕೆಲಸ ಮುಂದುವರಿಸಿದ್ದಾನೆ. ಇದೀಗ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.








