ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು ಬ್ಯಾಡ್ಮಿಂಟನ್ ಕೋಚಿಂಗ್ ಸೆಂಟರ್ ಗೆ ತೆರಳುತ್ತಿದ್ದ 16 ವರ್ಷದ ಬಾಲಕಿಯ ಮೇಲೆ ಕೋಚ್ ಒಬ್ಬ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 16 ವರ್ಷದ ಬಾಲಕಿಯ ಮೇಲೆ ಬ್ಯಾಡ್ಮಿಂಟನ್ ಕೋಚ್ ಅತ್ಯಾಚಾರ ಎಸಗಿದ್ದಾನೆ.
2 ವರ್ಷಗಳಿಂದ ಬ್ಯಾಡ್ಮಿಂಟನ್ ಕೋಚಿಂಗ್ ಪಡೆಯುತ್ತಿದ್ದ ಬಾಲಕಿ. ತರಬೇತಿ ನೀಡುವ ನೆಪದಲ್ಲಿ ಬಾಲಕಿಯ ಮೇಲೆ ಕೋಚ್ ಅತ್ಯಾಚಾರ ಎಸಗಿದ್ದಾನೆ. ತಮಿಳುನಾಡು ಮೂಲದ ಸುರೇಶ್ ಬಾಲಾಜಿ (26) ಎನ್ನುವ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಗಾಗ ಬಾಲಕಿಯನ್ನು ಕೋಚ್ ಸುರೇಶ್ ತನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಈ ವೇಳೆ ಬಾಲಕಿಯ ಮೇಲೆ ಕೋಚ್ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಈ ಕುರಿತು ಯಾರಿಗಾದರೂ ಹೇಳಿದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದನಂತೆ .
ಬಳಿಕ ಬಾಲಕಿ ರಜೆಗೆ ಎಂದು ಅಜ್ಜಿ ಮೆನೆಗೆ ತೆರಳಿದ್ದಾಳೆ. ಈ ವೇಳೆ ಬಾಲಕಿ ಅಜ್ಜಿಯ ಮೊಬೈಲಿಂದ ಬಾಲಕಿ ನಗ್ನ ಫೋಟೋಗೆ ಕಳುಹಿಸಿದ್ದಾಳೆ. ಮೊಬೈಲ್ ಚೆಕ್ ಮಾಡಿ ಬಾಲಕಿ ಪೋಷಕರಿಗೆ ಅಜ್ಜಿ ಮಾಹಿತಿ ನೀಡಿದ್ದಾಳೆ. ಆಗ ಬಾಲಕಿಯನ್ನು ವಿಚಾರಿಸಿದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಪೋಷಕರ ದೂರು ಆಧರಿಸಿ ಕೋಚ್ ಸುರೇಶ್ ಬಾಲಾಜಿ ಅರೆಸ್ಟ್ ಆಗಿದ್ದಾನೆ. ಆರೋಪಿ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.ಅಲ್ಲದೆ ಆರೋಪಿ ಸುರೇಶ್ ಬಾಲಾಜಿ ಮೊಬೈಲ್ ನಲ್ಲಿ 8 ಯುವತಿಯರ ನಗ್ನ ಚಿತ್ರಗಳು ಕೂಡ ತನಿಖೆಯ ವೇಳೆ ಪತ್ತೆಯಾಗಿದೆ.