ಯಾದಗಿರಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಯಾದಗಿರಿಯಲ್ಲಿ 13 ವರ್ಷದ ಬಾಲಕಿಯ ಮೇಲೆ ಇಬ್ಬರು ಕಾಮುಕರು ಅತ್ಯಾಚಾರ ನಡೆಸಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗ್ರಾಮವೊಂದರಲ್ಲಿ ನಿನ್ನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಹೌದು ಗ್ರಾಮದ ರಾಮರೆಡ್ಡಿ, ಸಂಜೀವಗೌಡ ಎಂಬ ಇಬ್ಬರು ಕಾಮುಕರು ಸೇರಿ ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಬಾಲಕಿ ಬಹಿರ್ದೆಸೆಗಾಗಿ ಬಯಲಿಗೆ ಹೋಗಿದ್ದಳು. ಅದೇ ಗ್ರಾಮದಲ್ಲಿ ಮನೆಯೊಂದು ಖಾಲಿ ಇತ್ತು, ಯಾರು ಇಲ್ಲದಾಗ ಬಾಲಕಿ ಮೇಲೆ ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ.
ಇಬ್ಬರೂ ಆರೋಪಿಗಳು ಬಾಲಕಿಯ ಜೊತೆ ಬಹಳ ಸಲುಗೆಯಿಂದ ಇದ್ದರು. ಅದೇ ಸಲುಗೆಯಿಂದ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಕೇಸ್ ನೀಡಲು ಯುವತಿಯ ಪೋಷಕರು ಮುಂದಾಗಿಲ್ಲ. ಹೀಗಾಗಿ ಸ್ವತಃ ಕೇಸ್ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಯಾದಗಿರಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.