ಹಾವೇರಿ : ರಾಜ್ಯದಲ್ಲಿ ಡೆಂಗ್ಯೂ ಜ್ವರದ ಆರ್ಭಟದ ನಡುವೆ ಇದೀಗ ಇಲಿ ಜ್ವರದ ಭೀತಿ ಎದುರಾಗಿದ್ದು, ಹಾವೇರಿಯಲ್ಲಿ 12 ವರ್ಷದ ಬಾಲಕನಿಗೆ ʻಇಲಿ ಜ್ವರʼ ದೃಢಪಟ್ಟಿದೆ.
ಹಾವೇರಿಯ ಗ್ರಾಮವೊಂದರ 12 ವರ್ಷದ ಬಾಲಕನಿಗೆ ಇಲಿ ಜ್ವರ ಇರುವುದು ದೃಢಪಟ್ಟಿದೆ. ಹಾವೇರಿ ಜಿಲ್ಲಾಸ್ಪತ್ರೆಯಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಕೆಲದ ದಿನಗಳಿಂದ ಜ್ವರದಿಂದ ಬಳುತ್ತಿದ್ದ ಬಾಲಕನಿಗೆ ರಕ್ತ ಪರೀಕ್ಷೆ ಮಾಡಿದ್ದು, ಪರೀಕ್ಷೆಯಲ್ಲಿ ಇಲಿ ಜ್ವರ ಇರುವುದು ದೃಢಪಟ್ಟಿದೆ. ರಕ್ತ ಪರೀಕ್ಷೆ ನಂತರ ಊರಿಗೆ ಬಾಲಕನನ್ನು ಪೋಷಕರು ಕರೆದುಕೊಂಡು ಹೋಗಿದ್ದರು. ಇಲಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿಗಳು ಮತ್ತೆ ಬಾಲಕನಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಬಾಲಕನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.