ಹಾವೇರಿ : ಹಾವೇರಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಮನೆ ಮುಂದೆ ಆಟವಾಡುತ್ತಿದ್ದ 12 ವರ್ಷದ ಬಾಲಕನನ್ನು ದುಷ್ಕರ್ಮಿಗಳು ಅಪಹರಣಕ್ಕೆ ಯತ್ನಿಸಿದ್ದು, ಅದೃಷ್ಟವಶಾತ್ ಬಾಲಕ ತನ್ನ ಸಮಯ ಪ್ರಜ್ಞೆಯಿಂದ ಕಿಡ್ನಾಪರಿಂದ ಬಚಾವ್ ಆಗಿರುವ ಘಟನೆ ಹಾವೇರಿ ನಗರದ ಪುರದ ಓಣಿಯಲ್ಲಿ ನಡೆದಿದೆ.
ಅಪಹರಣಕ್ಕೊಳಗಾಗಿದ್ದ ಬಾಲಕನನ್ನು ಮೊಹ್ಮದ್ ಅಯಾನ್(12) ಎಂದು ತಿಳಿದುಬಂದಿದೆ. ಹಾವೇರಿ ನಗರದ ಪುರದ ಓಣಿ ನಿವಾಸಿ ಮೊಹಮ್ಮದ್ ಅಯಾನ್ ನಿನ್ನೆ ಸಂಜೆ ಸುಮಾರು 7 ಗಂಟೆಗೆ ಎಂದಿನಂತೆ ಹೊರಗಡೆ ಬಂದಿದ್ದ. ಈ ವೇಳೆ ಮಾರುತಿ ಇಕೋ ವ್ಯಾನ್ ನಲ್ಲಿ ಮಾಸ್ಕ್ ಧರಿಸಿದ್ದ ಅಪಹರಿಸಲು ಬಂದ ನಾಲ್ವರು ಆಗುಂತಕರು. ಬಾಲಕನ್ನು ಹಿಡಿದು ವ್ಯಾನ್‌ಗೆ ತಳ್ಳಿದ್ದಾರೆ. ಓಣಿಯಿಂದ ಕಿಡ್ನಾಪ್ ಮಾಡಿದ ಬಳಿಕ ಅಲ್ಲಿಂದ ಅಕ್ಕಿಪೇಟೆಗೆ ಕರೆತಂದಿರುವ ದುರುಳರು. ಈ ವೇಳೆ ಅಲ್ಲಿಂದ ಬಿಡಿಸಿಕೊಳ್ಳಲು ಯತ್ನಿಸಿದ ಬಾಲಕನ ಮುಖದ ಭಾಗ, ಗಲ್ಲ ಹಾಗೂ ಬೆನ್ನಿಗೆ ಹಲ್ಲೆ ಮಾಡಿದ್ದಾರೆ.
ಅಷ್ಟರಲ್ಲಿ ಅಪಹರಣಕಾರರಿಗೆ ತುರ್ತು ವಿಸರ್ಜನೆ ಹಿನ್ನೆಲೆ ಮಧ್ಯೆ ವ್ಯಾನ್ ನಿಲ್ಲಿಸಿ ಕೆಳಗಿಳಿದಿದ್ದಾರೆ. ಗಾಡಿ ನಿಲ್ಲಿಸಿ ಡೂರ್ ತೆಗೆದಿದ್ದೇ ತಡ ಅಲ್ಲಿಂದ ತಕ್ಷಣ ಹೊರಕ್ಕೆ ಜಿಗಿದು ಬಾಲಕ ತಪ್ಪಿಸಿಕೊಂಡು ಬಂದಿದ್ದಾನೆ. ಬಾಲಕ ಮನೆಗೆ ಓಡೋಡಿ ಬಂದು ಆಗಿರುವಂತಹ ಘಟನೆ ಕುರಿತಂದು ಪೋಷಕರ ಮುಂದೆ ತಿಳಿಸಿದ್ದಾನೆ. ಇದರಿಂದ ಸಹಜವಾಗಿ ಹಾವೇರಿ ನಗರದಲ್ಲಿ ಪೋಷಕರು ಭಯಭೀತರಾಗಿದ್ದಾರೆ.