ತಮಿಳುನಾಡು : ತಮಿಳುನಾಡಿನಲ್ಲಿ ಫೆಂಗಲ್ ಸೈಕ್ಲೋನ್ ನಿಂದ ಜನರು ಬೆಚ್ಚಿ ಬಿದ್ದಿದ್ದು ಇದುವರೆಗೂ ಈ ಒಂದು ಚಂಡಮಾರುತದ ಪರಿಣಾಮದಿಂದಾಗಿ ಒಟ್ಟು 11 ಜನರು ಸಾವನ್ನಪ್ಪಿದ್ದರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಹೌದು ತಮಿಳುನಾಡಿನಲ್ಲಿ ಫೆಂಗಲ್ ಆರ್ಭಟಕ್ಕೆ 11 ಜನರು ಬಲಿಯಾಗಿದ್ದಾರೆ. ಫೆಂಗಲ್ ಸೈಕ್ಲೋನ್ ಆರ್ಭಟಕ್ಕೆ ಇದುವರೆಗೂ 11 ಜನರು ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ ಫೆಂಗಲ್ ಅಬ್ಬರಿಸುತ್ತಿದ್ದು, ಮನೆಯ ಮೇಲೆ ಗುಡ್ಡ ಕುಸಿದು ದಂಪತಿ ಸೇರಿದಂತೆ, ಐವರು ಮಕ್ಕಳು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಈ ಒಂದು ಘೋರ ದುರಂತ ಸಂಭವಿಸಿದೆ.
ರಾಜಕುಮಾರ್ ಹಾಗೂ ಮೀನಾ ದಂಪತಿ ಸೇರಿದಂತೆ ಐವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮನೆಯ ಮೇಲೆ ಬೆಟ್ಟ ಕುಸಿದು ಮಣ್ಣಿನ ಆಡಿ 7 ಜನರು ಸಿಲುಕಿದ್ದರು. ನವೆಂಬರ್ 30ರಂದು ಕರೆಂಟ್ ಶಾಕ್ ನಿಂದ ನಾಲ್ವರು ಮೃತಪಟ್ಟಿದ್ದರು. ಫೆಂಗಲ್ ಸೈಕ್ಲೋನ್ ಆರ್ಭಟಕ್ಕೆ ತಮಿಳುನಾಡಿನ ಜನ ಇದೀಗ ಅಕ್ಷರಶಃ ಬೆಚ್ಚಿಬಿದ್ದಿದೆ.