ಬಳ್ಳಾರಿ : ಇತ್ತೀಚಿಗೆ ಬಳ್ಳಾರಿಯ ಕಣೆಕಲ್ ರಸ್ತೆಯ ರಾಣಿತೋಟದಲ್ಲಿ ವೆಂಕಟೇಶ್ ಎನ್ನುವ ವ್ಯಕ್ತಿಯ ಭೀಕರ ಕೊಲೆಯಾಗಿತ್ತು. ಈ ಒಂದು ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಕೊಲೆಯಾದ 24 ಗಂಟೆಯೊಳಗೆ 11 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.ಆದರೆ ಈ ಒಂದು ಕೊಲೆಯ ಹಿಂದಿನ ರಹಸ್ಯ ಬೇಧಿಸಿದ ಪೊಲೀಸರು ಸ್ವತಃ ಬೆಚ್ಚಿಬಿದ್ದಿದ್ದಾರೆ.
ಹೌದು ಕೊಲೆ ಸಂಬಂಧ 24 ಗಂಟೆಯಲ್ಲೇ 11 ಆರೋಪಿಗಳ ಬಂಧನವಾಗಿದೆ. ನಿನ್ನೆ ಕಣೆಕಲ್ ರಸ್ತೆಯ ರಾಣಿ ತೋಟದಲ್ಲಿ ವೆಂಕಟೇಶ್ ಕೊಲೆ ಆಗಿತ್ತು. ಶುಕ್ರವಾರ ಬೆಳಗಿನ ಜಾವ ವೆಂಕಟೇಶ್ ಕೊಲೆಯಾಗಿತ್ತು. ಆದರೆ ಈ ಕೊಲೆಯ ಹಿಂದೆ ಪತ್ನಿಯ ಕೈವಾಡ ಇರುವುದು ಪತ್ತೆಯಾಗಿದೆ. ಪತಿಯ ಕೊಲೆಗೆ ಪತ್ನಿ ನೀಲವೇಣಿ ಸುಪಾರಿ ಕೊಟ್ಟಿದ್ದಳು ಎನ್ನಲಾಗಿದೆ.
ಹೌದು ಆನಂದ್ ಜೊತೆಗೆ ಪತ್ನಿ ನೀಲವಣಿಗೆ ವ್ಯವಹಾರದ ಸಂಬಂಧ ಸಲುಗೆ ಇತ್ತು. ಸಲುಗೆ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ನೀಲವೇಣಿ ನಡತೆಯ ಬಗ್ಗೆ ಪತಿ ವೆಂಕಟೇಶ್ ಸಂಶಯ ಪಟ್ಟಿದ್ದ. ಇದೇ ಕಾರಣಕ್ಕೆ ಪದೇ ಪದೇ ವೆಂಕಟೇಶ್ ಮತ್ತು ಪತ್ನಿ ನೀಲವೇಣಿ ಮಧ್ಯೆ ಗಲಾಟೆ ಆಗುತ್ತಿತ್ತು.ಪತಿ ಇದ್ದರೆ ತನಗೆ ಅಕ್ರಮ ಸಂಬಂಧಕ್ಕೆ ಅಡ್ಡಿ ಆಗುತ್ತದೆ ಎಂದು ಪತ್ನಿಯೆ ಇದೀಗ ತನ್ನ ಪ್ರಿಯತಮೆಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾಳೆ.
ಆನಂದ್ ಮೂಲಕ ಗಂಡನಿಗೆ ಪಾಪಿ ಪತ್ನಿ ನೀಲವೇಣಿ ಚಟ್ಟ ಕಟ್ಟಿಸಿದ್ದಾಳೆ. ಕೊಲೆ ಪ್ರಕರಣದ 2ನೇ ಆರೋಪಿ ಆನಂದ್ ಜೊತೆಗೆ ವ್ಯವಹಾರ ಇತ್ತು. ವ್ಯವಹಾರದಲ್ಲಿ ಅಕ್ರಮ ಸಂಬಂಧ ಬೆಳೆಸಿದಳು ಈ ಹಿನ್ನೆಲೆಯಲ್ಲಿ ಪತಿ ಅಕ್ರಮ ಸಂಬಂಧಕ್ಕೆ ಅಡ್ಡಿ ಆಗುತ್ತಾನೆ ಎಂದು ಆತನ ಕಥೆ ಮುಗಿಸಿದ್ದಾಳೆ.