ಕೋಲಾರ : ದೀಪಾವಳಿ ವೇಳೆ ಪಟಾಕಿ ಸಿಡಿಸುವಾಗ ಅತ್ಯಂತ ಜಾಗರೂಕಾಗಿ ಇರಬೇಕು. ಮಕ್ಕಳ ಜೊತೆಗೆ ಪೋಷಕರು ಸಹ ಎಚ್ಚರದಿಂದಿರಬೇಕು. ಬೆಂಗಳೂರಿನಲ್ಲಿ ಇದುವರೆಗೂ ಪಟಾಕಿ ಸಿಡಿತ ಪ್ರಕರಣ ಸಂಖ್ಯೆ 150 ದಾಟಿದೆ. ಅಲ್ಲದೆ 8 ಜನರು ಶಾಶ್ವತವಾಗಿ ಕಣ್ಣು ಸಹ ಕಳೆದುಕೊಂಡಿದ್ದಾರೆ. ಇದೀಗ ಕೋಲಾರ ಜಿಲ್ಲೆಯಲ್ಲಿ ಪಟಾಕಿ ಹಿಡಿಸುವಾಗ 10 ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ವರದಿಯಾಗಿದೆ.
ಹೌದು ದೀಪಾವಳಿ ಸಂಭ್ರಮಾಚರಣೆಯಲ್ಲಿ ಪಟಾಕಿ ಸಿಡಿಸುವಾಗ 10 ಜನರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. 10 ಗಯಾಳುಗಳ ಪೈಕಿ ಎಂಟು ಮಕ್ಕಳ ಕಣ್ಣಿಗೆ ಗಂಭೀರವಾದ ಗಾಯಗಳಾಗಿವೆ. ಚಿಕಿತ್ಸೆ ಪಡೆದು ಇದೀಗ ಮನೆಗಳಿಗೆ ತೆರಳಿದ್ದಾರೆ ಎಂದು ಕೋಲಾರ ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸೆ ಜಗದೀಶ್ ಈ ಕುರಿತು ಮಾಹಿತಿ ನೀಡಿದ್ದಾರೆ.