ಹಾವೇರಿ : ನೀರಾವರಿ ಇಲಾಖೆಯಲ್ಲಿ ಶೇ. 10 ರಿಂದ 12 ರಷ್ಟು ಕಮಿಷನ್ ಕೇಳುತ್ತಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 8 ರಿಂದ 10 ರಷ್ಟು ಕಮಿಷನ್ ಫಿಕ್ಸ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾವೇರಿ ಜಿಲ್ಲೆಯಲ್ಲಿ ಬಾಕಿ ಹಣ ಬಿಡುಗಡೆಗೆ ಈಗಾಗಲೇ ಕಮಿಷನ್ ಪಾವತಿ ಮಾಡಲಾಗಿದೆ. ಸರ್ಕಾರ ಕೂಡಲೇ ಗುತ್ತಿಗೆದಾರರಿಗೆ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಹಾವೇರಿ ಜಿಲ್ಲಾ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಒತ್ತಾಯಿಸಿದರು.
ಈ ಕುರಿತು ಸರ್ಕಾರದ ವಿರುದ್ಧ ಹಾವೇರಿ ಜಿಲ್ಲಾ ಗುತ್ತಿಗೆದಾರರ ಸಂಘ ಆರೋಪ ಮಾಡುತ್ತಿದ್ದು, ಮುಂಗಡವಾಗಿ ಕಮಿಷನ್ ನೀಡಿದರು ಬಾಕಿ ಹಣ ಪಾವತಿ ಮಾಡಿಲ್ಲ ಬಾಕಿ ಬಿಲ್ ನೀಡುವ ಬಗ್ಗೆ ಸಿವಿಲ್ ಗುತ್ತಿಗೆದಾರರಿಗೆ ಅನ್ಯಾಯವಾಗಿದೆ. ಮಾರ್ಚ್ ಅಂತ್ಯದಲ್ಲಿ ಪಿಡಬ್ಲ್ಯೂಡಿ ಇಂದ ಅನುದಾನ ಬಿಡುಗಡೆ ಆಗಿದೆ. ಆದರೆ ಉಳಿದ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಹಳ ಸಮಸ್ಯೆಯಾಗಿದೆ. ಮಾರ್ಚ್ ತಿಂಗಳಲ್ಲಿ ಸಣ್ಣ ಗುತ್ತಿಗೆದಾರರಿಗೆ ಬಾಕಿ ಹಣ ಬಂದಿದೆ. ಇನ್ನು ಎರಡು ಕೋಟಿಯಿಂದ 5 ಕೋಟಿ ರೂಪಾಯಿ ಬಾಕಿ ಬಿಲ್ ಬರಬೇಕಿದೆ ಎಂದು ಹಾವೇರಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿಕೆ ನೀಡಿದರು.
ಆರ್‌ಡಿಪಿಆರ್ ನಲ್ಲಿ 4 ವರ್ಷದ ಬಾಕಿ ಬಿಲ್ ಪೆಂಡಿಂಗ್ ಇದೆ ಗುತ್ತಿಗೆದಾರರು ಸಾಲಕ್ಕೆ ಬಡ್ಡಿ ಕಟ್ಟುವುದರಲ್ಲಿ ಸತ್ತು ಹೋಗಿದ್ದಾರೆ. ಸಿ ಎಸ್ ಪಿ ಟಿ ಎಸ್ ಪಿ ಗುತ್ತಿಗೆದಾರರ ಬಗ್ಗೆ ಪಾವತಿಗೆ ಮನವಿ ಮಾಡಿದ್ದಾರೆ. ಬಿಲ್ ಕ್ಲಿಯರ್ ಮಾಡುವಂತೆ ಪಿಡಬ್ಲ್ಯೂಡಿ ಸಚಿವರಿಗೆ ಮನವಿ ಮಾಡುತ್ತೇವೆ ಎಂದು ಹಾವೇರಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿಕೆ ನೀಡಿದರು.