ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಲಾಗಿದೆ ಎಂದು ಆರೋಪಿಸಿ ಇದೀಗ ಕಾಂಗ್ರೆಸ್ ಬಿಜೆಪಿಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎಂದು ತಿಳಿದುಬಂದಿದೆ.
ಹೌದು ಫೇಕ್ ನ್ಯೂಸ್ ಸೃಷ್ಟಿಸಿದ ಆರೋಪ ಸಂಬಂಧ ಇದೀಗ ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತೊಂದು ದೂರನ್ನು ಸಲ್ಲಿಸಿದೆ. ಕಾಂಗ್ರೆಸ್ ಮುಖಾಂಡರಾದ ರಮೇಶ್ ಬಾಬು, ವಿಜಯ ಮತ್ತಿಕಟ್ಟಿ, ರವಿ ಹಾಗೂ ದಿವಾಕರ್ರಿಂದ ಇದೀಗ ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತೊಂದು ದೂರು ದಾಖಲಿಸಿದೆ.
ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ರಮೇಶ್ ಬಾಬು ಈ ಕುರಿತಂತೆ ಮಾತನಾಡಿದ ಅವರು, ಬಸವಣ್ಣನವರನ್ನು ರಾಜ್ಯದ ಸಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಹಿಂದೂಗಳೇ ಬಿಜೆಪಿಗೆ ಬೇನಾಮಿ ಹೆಸರಲ್ಲಿ ಕಾಂಗ್ರೆಸ್ ಟೀಕಿಸುವ ಕಾಯಿಲೆ. ಇದೆ ಸಿಎಂ ಸಿದ್ದರಾಮಯ್ಯ ಹೆಸರಲ್ಲಿ ಫೇಕ್ ಅಕೌಂಟ್ ಸೃಷ್ಟಿ ಮಾಡಲಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಅಧಿಕೃತ ಅಕೌಂಟ್ ಗಳಿಂದಲೇ ಫೇಕ್ ಸುದ್ದಿ ಹರಡಲಾಗುತ್ತಿದೆ. ಇದರ ಹಿಂದೆ ಬಿವೈ ವಿಜಯೇಂದ್ರ ಹಾಗೂ ಆರ್. ಅಶೋಕ್ ಇರಬಹುದೆಂಬ ಅನುಮಾನ ಇದೆ.ಹಾಗಾಗಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇವೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ರಮೇಶ ಬಾಬು ಹೇಳಿಕೆ ನೀಡಿದರು.