ಶಿವಮೊಗ್ಗ : ಯುವಕನೊಬ್ಬ 14 ವರ್ಷದ ಬಾಲಕಿಯ ಹಿಂದೆ ಬಿದ್ದು ಪ್ರೀತಿಸುವಂತೆ ಕಿರುಕುಳ ನೀಡಿದ್ದಾನೆ. ಈ ವೇಳೆ ಯುವಕನ ಕಿರುಕುಳ ತಾಳಲಾರದೆ ಬಾಲಕಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಗೊಂದಿಚಟ್ನಹಳ್ಳಿಯಲ್ಲಿ ನಡೆದಿದೆ.
‘ಆನ್ಲೈನ್ ಗೇಮಿಂಗ್’ ಚಟ: ಸಾಲವನ್ನು ಮರುಪಾವತಿಸಲು ವಿಮಾ ಹಣಕ್ಕೆ ತಾಯಿಯನ್ನೇ ಕೊಂದ ಮಗ
ಆತ್ಮಹತ್ಯೆಗೆ ಶರಣಾಗಿರುವ ಬಾಲಕಿಯನ್ನ ವರ್ಷಣಿ (14) ಎಂದು ಹೇಳಲಾಗುತ್ತಿದೆ. ಶಿವಮೊಗ್ಗ ತಾಲೂಕಿನ ಗೊಂದಿಚಟ್ನಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರೀತಿಸುವಂತೆ ತ್ಯಾಗರಾಜ್ ಎನ್ನುವ ವ್ಯಕ್ತಿ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಎರಡು ತಿಂಗಳ ಹಿಂದೆ ಬಾಲಕಿ ಪೋಷಕರು ಯುವಕನಿಗೆ ಎಚ್ಚರಿಕೆ ನೀಡಿದ್ದರು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಂಜಾರಿಯ ಪ್ರಮಾಣ ವಚನ ಸ್ವೀಕಾರ
ಈ ವೇಳೆ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತ್ಯಾಗರಾಜ್ ಮತ್ತೆ ಬಾಲಕಿಗೆ ಕಾಟ ಕೊಡಲು ಶುರು ಮಾಡಿದ್ದಾನೆ. ಯುವಕನ ಕಾಟ ತಾಳಲಾರದೆ ನಿನ್ನೆ ಬಾಲಕಿ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಘಟನೆ ಕುರಿತಂತೆ ಶಿವಮೊಗ್ಗದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಮುಂದೆ ಪೊಲೀಸರು ಆಸ್ತಿ, ಖರೀದಿ ಮಾರಾಟ ಮಾಡಲು ‘ಅನುಮತಿ’ ಕಡ್ಡಾಯ! ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ!!