ರಾಯಚೂರು : ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಒಂದೇ ದಿನದಲ್ಲಿ ಇಬ್ಬರು ಮಕ್ಕಳ ಮೇಲೆ ದಾಳಿ ನಡೆಸಿ ಗಂಭೀರವಾದಂತಹ ಗಾಯಗೊಳಿಸಿವೆ ಎಂದು ಹೇಳಲಾಗುತ್ತಿದೆ.ಬಾಲಕ ಅಖಿಲ್ ಹಾಗೂ ಬಾಲಕಿ ಜೋಯ ಫಾರೂಕಿ ಎಂಬ ಮಕ್ಕಳ ಮೇಲೆ ದಾಳಿ ನಾಯಿಗಳು ದಾಳಿ ನಡೆಸಿವೆ.
ಒಂದೇ ದಿನ ಇಬ್ಬರು ಮಕ್ಕಳ ಮೇಲೆ ದಾಳಿ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿವೆ.ಚಾಕ್ಲೆಟ್ ತರಲು ಹೋದ ಬಾಲಕನ ಮೇಲೆ ನಾಯಿ ಒಂದು ದಾಳಿ ನಡೆಸಿದ್ದು ಬಾಲಕನ ಬಾಯಿ ಮತ್ತು ಕೆನ್ನೆಗೆ ಗಂಭೀರವಾದಂತಹ ಗಾಯಗಳಾಗಿವೆ.ತಕ್ಷಣ ಬಾಲಕನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅದೇ ರೀತಿ ಶಾಲೆಯಿಂದ ವಾಪಸ್ ಬರುತ್ತಿದ್ದ ಬಾಲಕಿಯ ಮೇಲು ಕೂಡ ಬೀದಿ ನಾಯಿ ದಾಳಿ ನಡೆಸಿದ್ದು ಮಕ್ಕಳ ಹೀನಾಯ ಸ್ಥಿತಿ ಕಂಡು ಹೆತ್ತವರು ಇದೀಗ ಕಣ್ಣೀರು ಸುರಿಸುತ್ತಿದ್ದಾರೆ. ಮಂಗಳವಾರ ಪೇಟೆ ನಿವಾಸಿ ಅಖಿಲ್ ಈ ವೇಳೆ ಗಾಯಗಳಾಗಿದೆ ಇಂದಿರಾನಗರ ನಿವಾಸಿ ಜೋಯಾ ಫಾರೂಕಿಯು ಗಾಯಗಳಾಗಿವೆ ಚಿಕಿತ್ಸೆ ನೀಡಲಾಗುತ್ತಿದೆ.