ರಾಯಚೂರು : ಕಳೆದ ವರ್ಷ ಬಳ್ಳಾರಿ, ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಾಣಂತಿಯರ ಸಾವು ಇಡೀ ರಾಜ್ಯವೇ ಬೆಚ್ಚಿ ಬೆಳಿಸುವಂತಿತ್ತು. ಇದೀಗ ರಾಜ್ಯದಲ್ಲಿ ಬಾಣಂತಿಯರ ಸಾವು ಮುಂದುವರೆದಿದ್ದು, ನಿನ್ನೆ ಕೊಪ್ಪಳದಲ್ಲಿ ಓರ್ವ ಬಾಣಂತಿ ಸಾವನಪ್ಪಿದ್ದರೆ, ಇಂದು ನಸುಕಿನ ವೇಳೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಮತ್ತೋರ್ವ ಬಾಣಂತಿ ಹಾಗೂ ಮಗು ಸಾವನಪ್ಪಿರುವ ಘಟನೆ ವರದಿಯಾಗಿದೆ.
ಹೌದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಶಿವಲಿಂಗಮ್ಮ ಎನ್ನುವ ಬಾಣಂತಿ ಸಾವನಪ್ಪಿದ್ದಾರೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮಗು ಹಾಗು ಬಾಣಂತಿ ಶಿವಲಿಂಗಮ್ಮ (21) ಸಾವನ್ನಪ್ಪಿದ್ದಾ. ಜಿಲ್ಲೆಯಲ್ಲಿ ಅಕ್ಟೋಬರ್ ನಿಂದ ಇದುವರೆಗೂ 11 ಬಾಣಂತಿಯ ಸಾವಾಗಿದೆ. ದೇವದುರ್ಗ ತಾಲೂಕಿನ ಮಸದಾಪುರ ಗ್ರಾಮದ ನಿವಾಸಿ ಶಿವಲಿಂಗಮ್ಮ ಡಿಸೆಂಬರ್ 27 ರಂದು ಸಿಜೇರಿಯನ್ ಮೂಲಕ ಶಿವಲಿಂಗಮ್ಮಗೆ ಹೆರಿಗೆ ಆಗಿತ್ತು. ನಾಲ್ಕು ದಿನಗಳಿಂದ ಐಸಿಯುನಲ್ಲಿ ಶಿವಲಿಂಗಮ್ಮ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 5 ಗಂಟೆಗೆ ಆಸ್ಪತ್ರೆಯಲ್ಲಿ ಬಾಣಂತಿ ಹಾಗೂ ಮಗು ಸಾವನ್ನಪ್ಪಿದೆ. ವೈದ್ಯರ ನಿರ್ಲಕ್ಷದಿಂದಲೇ ಬಾಣಂತಿ ಶಿವಲಿಂಗಮ್ಮ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸದ್ಯ ರಿಮ್ಸ್ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕೊಪ್ಪಳದಲ್ಲೂ ಬಾಣಂತಿ ಸಾವು!
ಅಲ್ಲದೆ ನಿನ್ನೆ ಕೊಪ್ಪಳದಲ್ಲಿ ಕೂಡ ಓರ್ವ ಬಾಣಂತಿಯ ಸಾವಾಗಿದೆ.ಡಿಸೆಂಬರ್ 31ರಂದು ಮಂಗಳವಾರ ಮುಂಜಾನೆ 7 ಗಂಟೆ ಸುಮಾರಿಗೆ ಕುಷ್ಟಗಿ ತಾಲೂಕಿನ ಆಡೂರು ಗ್ರಾಮದ ರೇಣುಕಾ ಪ್ರಕಾಶ್ ಹಿರೇಮನಿ (22) ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಅಸು ನೀಗಿದ್ದಾರೆ.ಬಾಣಂತಿಯರ ಆರೋಗ್ಯದಲ್ಲಿ ಉಂಟಾದ ಏರು-ಪೇರಿನಿಂದ ಸಾವು ಸಂಭವಿಸಿರುವುದು ದೃಢವೆಂದು ಕೊಪ್ಪಳದ ಕಿಮ್ಸ್ನ ತಾಯಿ-ಶಿಶು ಆಸ್ಪತ್ರೆಯ ಮುಖ್ಯಸ್ಥ ಡಾ.ಬಿ.ಎಚ್.ನಾರಾಯಣಿ ತಿಳಿಸಿದರು.
ಕುಕನೂರು ತಾಲ್ಲೂಕಿನ ಆಡೂರು ಗ್ರಾಮದ ರೇಣುಕಾ ಪ್ರಕಾಶ ಹಿರೇಮನಿ (22) ಕೊನೆಯುಸಿರೆಳೆದಿದ್ದು, ಸೋಮವಾರ ಕುಷ್ಟಗಿಯ ಡಾ.ಚಂದ್ರಕಲಾ ಅವರ ಬಳಿ ತಪಾಸಣೆಗೊಳಗಾದಾಗ ಅಧಿಕ ರಕ್ತದೊತ್ತಡ ಕಂಡು ಬಂದಿದ್ದರಿಂದ ಮತ್ತು ಗರ್ಭದಲ್ಲಿದ್ದ 36 ವಾರ 6 ದಿನದ ಮಗು ಸಾವನ್ನಪ್ಪಿರುವ ಶಂಕೆಯಿಂದ ಕೊಪ್ಪಳದ ತಾಯಿ-ಶಿಶು ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ.