ಬೆಂಗಳೂರು : ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದಾರೆ ಎಂದು ತನ್ನ ಇಬ್ಬರು ಶಾಲಾ ಸಹಪಾಠಿಗಳ ವಿರುದ್ಧವೆ ಮಹಿಳೆಯೊಬ್ಬಳು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಸಿಡೆದಹಳ್ಳಿ ನಿವಾಸದಲ್ಲಿ ಮಮತಾ (31) ನೇಣಿಗೆ ಶರಣಾದ ಮಹಿಳೆ ಎಂದು ತಿಳಿದುಬಂದಿದೆ. ಶಾಲಾ ಸಹಪಾಠಿಗಳಾದ ವಡ್ಡರಹಳ್ಳಿಯ ನಿವಾಸಿ ಅಶೋಕ ಹಾಗೂ ಜೆಪಿ ನಗರದ ನಿವಾಸಿ ಗಣೇಶ ವಿರುದ್ಧ ಮಹಿಳೆ ಕಿರುಕುಳದ ಆರೋಪ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಅಶ್ಲೀಲ ಸಂದೇಶ ಕಳಿಸಿ ನಮ್ಮ ಜೊತೆ ಸಹಕರಿಸು ಎಂದು ಕಿರುಕುಳ ನೀಡುತ್ತಿದ್ದರು. ನೈಟ್ ಔಟ್ ಬರುವಂತೆ ಅಶೋಕ ಹಾಗೂ ಗಣೇಶ್ ಮಹಿಳೆಗೆ ಒತ್ತಡ ಹೇರುತ್ತಿದ್ದರು. ನಿನ್ನ ಬಿಡುವುದಿಲ್ಲ ನಿನ್ನ ಸಂಸಾರ ಹಾಳು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು.ಇದೀಗ ಬೆದರಿಕೆಯಿಂದ ನೊಂದು ಮಹಿಳೆಯು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತಿ ಲೋಕೇಶ್ ನ ಫೋನ್ ಮಮತಾ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಮನೆ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಪತಿ ಲೋಕೇಶ್ ಆರೋಪಿಗಳಾದ ಅಶೋಕ್ ಹಾಗೂ ಗಣೇಶ್ ವಿರುದ್ಧ ಬಾಗಲಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮೂರು ವರ್ಷಗಳ ಹಿಂದೆ ಮಮತಾ ಹಾಗೂ ಲೋಕೇಶ್ ಪ್ರೀತಿಸಿ ಮದುವೆಯಾಗಿದ್ದರು. ಮನೆಯವರ ಒಪ್ಪಿಗೆ ಮೇರೆಗೆ ಮಮತಾ ಮತ್ತು ಲೋಕೇಶ್ ಮದುವೆಯಾಗಿದ್ದರು.