ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಯೋಗೇಶ್ ಎಂಬ ಯುವಕನ ಸಾವು ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ತಂದೆಯೇ ಮಗನನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾರ್ಚ್ 6 ರಂದು ಬೆಂಗಳೂರಿನಲ್ಲಿ ಯೋಗೇಶ್ (21) ಎನ್ನುವ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಈ ಒಂದು ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕುಡಿತ ಬಿಡಿಸಲಾಗದೆ ತಂದೆಯೆ ಯೋಗೇಶ್ನನ್ನೇ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪುತ್ರ ಯೋಗೇಶ್ ಹತ್ಯೆಗೆ ಇದು ಆತ್ಮಹತ್ಯೆ ಎಂದು ತಂದೆ ಪ್ರಕಾಶ್ ಬಿಂಬಿಸಿದ್ದರು.ಮಾರ್ಚ್ 6 ರಂದು ಬಸವೇಶ್ವರನಗರದಲ್ಲಿ ಯೋಗೇಶ್ ಕೊಲೆ ನಡೆದಿತ್ತು. ಆತ್ಮಹತ್ಯೆಯಲ್ಲ ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಬಳಿಕ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಮರಣೋತ್ತರವರೆಗೆ ಆತ್ಮಹತ್ಯೆ ಅಲ್ಲ ಇದು ಕೊಲೆ ಎಂದು ಉಲ್ಲೇಖವಾಗಿದೆ. ಪುತ್ರ ಯೋಗೇಶ್ ಕುಡಿತದ ಚಟದಿಂದ ತಂದೆ ಪ್ರಕಾಶ್ ಬೇಸತ್ತಿದ್ದರು. ಇದೇ ಕಾರಣಕ್ಕೆ ಪ್ರಕಾಶ್ ಪುತ್ರ ಯೋಗೇಶ್ ಕತ್ತು ಬಿಗಿದು ಉಸಿರುಘಟ್ಟಿಸಿ ಕೊಲೆ ದೈದಿದ್ದಾರೆ ಎನ್ನಲಾಗಿದೆ.ಸದ್ಯ ಆರೋಪಿ ಪ್ರಕಾಶ್ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.