ಬೆಂಗಳೂರು : ಉತ್ತರ ಭಾರತದಿಂದ ಬಂದಂತಹ ಯುವಕ ಒಬ್ಬ ಬೆಂಗಳೂರಿನಲ್ಲಿರುವ ಅತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿರುವ ಮೆಟ್ರೋ ಟ್ರ್ಯಾಕಿಗೆ ಜಿಗಿದು ಆತ್ಮಹತ್ಯೆ ಯತ್ನಿಸಿದ್ದು ಈ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತಿದೆ.
ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಟ್ರೈನ್ ಬರುವಂತಹ ಸಂದರ್ಭದಲ್ಲಿ ಉತ್ತರ ಭಾರತದ ಬಂದಂತಹ ಯುವಕ ತಕ್ಷಣ ಟ್ರ್ಯಾಕ್ ಗೆ ಜಿಗಿದಿದ್ದಾನೆ. ಈ ವೇಳೆ ಆತನಿಗೆ ಗಂಭೀರವಾದಂತಹ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರಿನ ನೇರಳೆ ಮಾರ್ಗದಲ್ಲಿ ಇರುವ ಈ ಒಂದು ನಿಲ್ದಾಣದಲ್ಲಿ ವೈಟ್‌ಫೀಲ್ಡ್ ಹಾಗೂ ಚಲ್ಲಗಟ್ಟ ಮಾರ್ಗ ಮಧ್ಯೆ ಹತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿ ಟ್ರ್ಯಾಕಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ ಸ್ಥಳಕ್ಕೆ ಮೆಟ್ರೋ ಸಿಬ್ಬಂದಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಿದ್ದಾರೆ.
ಚಂದ್ರ ಲೇಔಟ್ ಪೊಲೀಸ್ರಿಂದ ಇದೀಗ ಸ್ಥಳ ಮಹಜರು ನಡೆಸುತ್ತಿದ್ದು ಸ್ಥಳ ಮಹಜರು ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ಮೆಟ್ರೋ ಸ್ಥಗಿತ ಹಿನ್ನೆಲೆಯಲ್ಲಿ ಪ್ರಯಾಣಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ ಅಲ್ಲದೆ ಸ್ಥಳಕ್ಕೆ ಬಿಎಮ್ಆರ್‌ಸಿಎಲ್ ಅಧಿಕಾರಿಗಳು ಹಾಗೂ ಎಫ್ ಎಸ್ ಎಲ್ ತಂಡ ಸ್ಥಳ ಪರಿಶೀಲನೆಗೆ ಆಗಮಿಸಿದೆ.
ಇದೇ ಸಂದರ್ಭದಲ್ಲಿ ವೈಟ್‌ಫೀಲ್ಡ್ ಹಾಗೂ ಚಲ್ಲಗಟ್ಟ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. ಯಾರು ಆ ವ್ಯಕ್ತಿ ಇಂತಹ ಘಟನೆಗಳನ್ನು ತಡೆಯುವುದಕ್ಕೆ ಮೆಟ್ರೋ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ತಡೆಯುವುದಕ್ಕೆ ಆಗುವುದಿಲ್ಲ ಎಂದು ಮೆಟ್ರೋ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಅವಘಡಗಳಿಗೆ ಯಾರು ಹೊಣೆಯೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.