ತಿರುವನಂತಪುರ : 201 ಕೋಟಿ ರು. ಆದಾಯ ತೆರಿಗೆ ಬಾಕಿ ಪಾವತಿಸಬೇಕು ಎಂದು ಕಾಂಗ್ರೆಸ್ ಪಕ್ಷದ 9 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಡಿಸಿಎಂ ಡಿಕೆ ಹೂಡಿಕೆ ಮಾಡಿದ್ದಾರೆ ಎನ್ನಲಾದ ಕೇರಳದ ನ್ಯೂಸ್ ಚಾನಲ್ವೊಂದರ ಬ್ಯಾಂಕ್ ಖಾತೆಗಳನ್ನು ತೆರಿಗೆ ಇಲಾಖೆ ಶನಿವಾರ ಸ್ಥಗಿತಗೊಳಿಸಿದೆ.
‘ಜೈ ಹಿಂದ್ ಟೀವಿ’ ಚಾನೆಲ್ನ ಮಾತೃ ಸಂಸ್ಥೆಯಾದ ‘ಭಾರತ್ ಬ್ರಾಡ್ ಕಾಸ್ಟಿಂಗ್ ಕಂಪನಿ’ಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸುವಂತೆ ಕೇಂದ್ರ ಜಿಎಸ್ಟಿ ಮಂಡಳಿ ಬ್ಯಾಂಕ್ಗಳಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಭಾರತ್ ಬ್ರಾಡ್ಕಾಸ್ಟಿಂಗ್ ಕಂಪನಿ ಕೇಂದ್ರ ಸರ್ಕಾರಕ್ಕೆ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಈ ಚಾನೆಲ್ನಲ್ಲಿ ಡಿ.ಕೆ. ಶಿವಕುಮಾರ್ ಅವರ ಹೂಡಿಕೆಗೆ ಸಂಬಂಧಿಸಿ ದಂತೆ ಮಾಹಿತಿ ಕಲೆ ಹಾಕಲು ಇತ್ತೀಚೆಗೆ ಸಿಬಿಐ ನೋಟಿಸ್ ನೀಡಿತ್ತು.ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪ್ರಕರಣ ಹೈಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿರುವಾಗ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಚಾನೆಲ್ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೇ ಕಳೆದ ವರ್ಷ ಡಿ.22ರಂದು ಸಿಬಿಐ ನೀಡಿದ್ದನೋಟಿಸ್ಗೆ ನಾವು ಉತ್ತರಿಸಿದ್ದೇವೆ. ಆದರೂಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ.
‘ದಿಲ್ಲಿ ಚಲೋ’ ರೈತರ ಪ್ರತಿಭಟನೆ: ಖಲಿಸ್ತಾನಿ ನಾಯಕ ಅಮೃತಪಾಲ್, ಭಿಂದ್ರನ್ವಾಲೆ ಫೋಟೋ ಇರುವ ಪೋಸ್ಟರ್ಗಳು ಪ್ರದರ್ಶನ
ಟೊಮೇಟೊ ನಂತರ ಈಗ ನೀರಿನ ಸರದಿ : ಹುಬ್ಬಳ್ಳಿಯಲ್ಲಿ ನೀರಿನ ಟ್ಯಾಂಕರ್ ಕದ್ದು ಪರಾರಿಯಾದ ನೀರ್ಗಳ್ಳರು
ಅಶ್ಲೀಲ ಫೋಟೋ ಕಳಿಸಿ ಹಣಕ್ಕೆ ಬೇಡಿಕೆ ಕೇಸ್ : ಮೂವರು ಆರೋಪಿಗಳನ್ನ ಬಂಧಿಸಿದ ಸಿಸಿಬಿ