ನವದೆಹಲಿ: ನಿನ್ನೆ ಗರ್ಭಕಂಠ ಕ್ಯಾನ್ಸರ್ ನಿಂದ ನಟಿ ಪೂನಂ ಪಾಂಡೆ ಸಾವನ್ನಪ್ಪಿದ್ದಾರೆ ಎಂಬುದಾಗಿ ಸುದ್ದಿಯಾಗಿತ್ತು. ಆದ್ರೇ ಇಂದು ಸ್ವತಹ ಪೂನಂ ಪಾಂಡೆಯವರೇ ನಾನು ಸಾವನ್ನಪ್ಪಿಲ್ಲ. ಬದುಕಿದ್ದೇನೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.
ಹೌದು.. ರೂಪದರ್ಶಿ, ನಟಿ ಮತ್ತು ರಿಯಾಲಿಟಿ ಟಿವಿ ತಾರೆ ಪೂನಂ ಪಾಂಡೆ ಜೀವಂತವಾಗಿದ್ದಾರೆ. ಶನಿವಾರ ಇನ್ಸ್ಟಾಗ್ರಾಮ್ನಲ್ಲಿ, ಅವರು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ‘ಆಘಾತ’ ನೀಡಿದ್ದಕ್ಕಾಗಿ ಕ್ಷಮೆಯಾಚಿಸುವ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.
ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವಂತ ವೀಡಿಯೋದಲ್ಲಿ ನಾನು ಸಾವನ್ನಪ್ಪಿಲ್ಲ. ನಾನು ಸಾವನ್ನಪ್ಪಿದ್ದೇನೆ ಎಂಬುದು ಸುಳ್ಳು. ನಾನು ಬದುಕಿದ್ದೇನೆ ಎಂಬುದಾಗಿ ಪೂನಂ ಪಾಂಡೆ ಹೇಳಿಕೊಂಡಿದ್ದಾರೆ.
Like I said, #PoonamPandey is alive. It was a stunt to call attention to cervical cancer. https://t.co/xFboAT33m8 pic.twitter.com/uKoGMbv1Fb
— Shiv Aroor (@ShivAroor) February 3, 2024