ಬಾಗಲಕೋಟೆ : ರಾಜ್ಯದಲ್ಲಿ ಗಣೇಶ ವಿಸರ್ಜನೆ ಸಮಾರಂಭ ವೇಳೆ ಮತ್ತೊಂದು ದುರಂತ ಸಂಭವಿಸಿದ್ದು, ಮೆರವಣಿಗೆ ವೇಳೆ ಮುಸ್ಲಿಂ ಯುವಕನೊಬ್ಬ ಹಸಿರು ಧ್ವಜ ತಂದಿದ್ದಾನೆ. ಮೆರವಣಿಗೆ ಮೇಲೆ ಹಸಿರು ಧ್ವಜ ಹಾರಿಸಬೇಡ ಎಂದಿದ್ದಕ್ಕೆ ವಾಗ್ವಾದ ನಡೆದಿದ್ದು ಈ ವೇಳೆ ಮುಸ್ಲಿಂ ಯುವಕ ಹಿಂದೂ ಯುಗನಿಗೆ ಚಾಕು ಇರಿದಿರುವ ಘಟನೆ ಬಾಗಲಕೋಟೆ ತಾಲೂಕಿನ ಮುರುನಾಳಗ್ರಾಮದಲ್ಲಿ ನಡೆದಿದೆ.
ನವೀನ್ ಕೊಡ್ಲೆಪ್ಪನವರ್ (22) ಎಂಬ ಹಿಂದೂ ಯುವಕನಿಗೆ ಆಸೀಫ್ ಬೆಳಗಾಂಕರ್ ಎಂಬ ಮುಸ್ಲಿಂ ಯುವಕ ಚಾಕು ಇರಿದ್ದಾನೆ. ನವೀನ್ ಕೊಡ್ಲಾಪ್ಪನವರ್ ಎಡಗೈ ಹಾಗು ಬೆನ್ನಿಗೆ ಗಂಭೀರ ಗಾಯಗಳಾಗಿದ್ದು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುಡಿದಂತೆ ಕಲಾದಿಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.