ವಿಜಯಪುರ : ರಾಜ್ಯದಲ್ಲಿ ನಿನ್ನೆ ಅತ್ಯಂತ ಘೋರ ದುರಂತ ಸಂಭವಿಸಿದ್ದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಆಟವಾಡುತ್ತಾ ತೆರೆದ ಕೊಳವೆ ಬಾವಿಗೆ ಎರಡು ವರ್ಷದ ಬಾಲಕ ಬಿದ್ದಿರುವ ಘಟನೆ ನಡೆದಿತ್ತು. ಇದೀಗ ಇಡೀ ಕರುನಾಡಿನ ಜನತೆಯ ಪ್ರಾರ್ಥನೆ ಫಲಿಸಿದ್ದು ಬಾಲಕನನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ.
ಹೌದು ನಿನ್ನೆ ತೆರೆದು ಕೊಳವೆ ಬಾವಿಗೆ ಆಟವಾಡುತ್ತಾ ಬಿದ್ದಿದ್ದ ಬಾಲಕ ಸಾತ್ವಿಕ್ ಇದೀಗ ಮೃತ್ಯುವನ್ನೇ ಗೆದ್ದು ಬಂದಿದ್ದಾನೆ. ಸತತವಾಗಿ 20 ಗಂಟೆಗಳ ನಿರಂತರ ಕಾರ್ಯಾಚರಣೆ ಫಲವಾಗಿ ಇದೀಗ ಬಾಲಕ ಸಾತ್ವಿಕ್ ಬದುಕಿ ಬಂದಿದ್ದಾನೆ. ನಿನ್ನೆ ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಎಸ್‌ಡಿಆರ್ಎಫ್ ತಂಡ, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಇಂಡಿ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಸತತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಅಲ್ಲದೆ ಇಂದು ಬೆಳಿಗ್ಗೆ ಹೈದರಾಬಾದ್ನಿಂದ ಎನ್ ಡಿ ಆರ್ ಎಫ್ ತಂಡ ಕೂಡ ಎಂಟ್ರಿ ಕೊಟ್ಟಿದ್ದು ಇದೀಗ ಇವರೆಲ್ಲರ ಸತತ ಶ್ರಮದಿಂದಾಗಿ ಬಾಲಕ ಸಾತ್ವಿಕ್ ಬದುಕಿ ಬಂದಿದ್ದಾನೆ.
ಸುಮಾರು 15ರಿಂದ 20 ಅಡಿ ಆಳದ ಕೊಳವೆ ಬಾವಿಯಲ್ಲಿ ಮಗು ಸಾತ್ವಿಕ್ ತಲೆ ಕೆಳಗಾಗಿ ಬಿದ್ದಿದ್ದು, ಈ ವೇಳೆ ಮಗು ಜೀವಂತವಾಗಿದೆ ಎನ್ನುವುದಕ್ಕೆ ಕ್ಯಾಮೆರಾದಲ್ಲಿ ಮಗು ಕಾಲುಗಾಡಿಸುತ್ತಿರುವುದು ಕಂಡುಬಂದಿತ್ತು ಹೀಗಾಗಿ ಮಗುವಿನ ರಕ್ಷಣೆಗೆ ಸತತ ಪ್ರಯತ್ನ ನಡೆಸಲಾಗುತ್ತಿತ್ತು ಈ ವೇಳೆ ಇನ್ನೇನು ಮಗು ಬದುಕಿ ಬಿಟ್ಟಿದ್ದೇ ಎನ್ನುವಷ್ಟರಲ್ಲಿ ಎರಡು ಅಡಿ ಅಂತರದಲ್ಲಿ ಬೃಹತ್ ಕಲ್ಲು ಬಂಡೆ ಅಡ್ಡಲಾಗಿ ರಕ್ಷಣೆಗೆ ತೊಂದರೆ ಉಂಟು ಮಾಡಿತು.
ಈ ವೇಳೆ ಸಿಬ್ಬಂದಿಗಳು ಮಷೀನ್ನಿಂದ ಬಂಡೆಗಳನ್ನು ಕೊರೆದರೆ ಮಗು ಮತ್ತಷ್ಟು ಆಳಕ್ಕೆ ಕುಸಿಯಬಹುದು ಎಂಬ ಆಲೋಚನೆಯಿಂದ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್ಎಫ್ ತಂಡದ ಸಿಬ್ಬಂದಿಗಳು ಕೊಳವೆಬಾವಿ ಸುತ್ತ ಸುರಂಗ ಮಾರ್ಗ ಕೋರೆಯುತ್ತಿದ್ದ ವೇಳೆ ಕೈಯಿಂದ ಅಗೆಯಲು ಆರಂಭಿಸಿದರು. ಅಲ್ಲದೆ ಇದೇ ವೇಳೆ ಮಗುವಿಗೆ ಮೇಲಿಂದಲೇ ಆಕ್ಸಿಜನ್ನನ್ನು ಕೂಡ ಪೂರೈಕೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಬಾಲಕ ಸಾತ್ವಿಕ್ನಾನು ರಕ್ಷಣೆ ಮಾಡಿದ ತಕ್ಷಣ ಸ್ಥಳದಲ್ಲಿ ಇದ್ದ ವೈದ್ಯರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು ತಕ್ಷಣ ಮಗುವನ್ನು ಹೊರ ತೆಗೆದುಕೊಂಡು ಮಗುವಿಗೆ ಬೇಕಾದಂತಹ ಎಲ್ಲಾ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ರವಾನಿಸಲಾಯಿತು.
ಘಟನೆ ಹಿನ್ನೆಲೆ?
ನಿನ್ನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶಂಕರಪ್ಪ ಮುಜಗೊಂಡ ಅನುರ ಜಮೀನಿನಲ್ಲಿ ನೀರಿಗಾಗಿ ಕೊಳವೆಬಾವಿಯನ್ನು ಕೊಡಿಸಲಾಗಿತ್ತು ಸುಮಾರು 500 ಅಡಿ ಆಳದ ಕೊರವೇ ಬಾವ ಏನೋ ಕೊರಿಸಲಾಗಿತ್ತು ಈ ವೇಳೆ ನೀರು ಬರದೇ ಇರುವ ಕಾರಣ ಅದನ್ನು ಮುಚ್ಚಿದ್ದರು.
ಈ ವೇಳೆ ಬಾಲಕ ಸಾತ್ವಿಕ್ ತಂದೆ ಇನ್ನೊಂದು ಮೋಟರ್ ಆನ್ ಮಾಡಲು ತೆರಳಿದ್ದಾಗ ಸಾತ್ವಿಕ್ ಆಟವಾಡುತ್ತಾ ತಲೆಕೆಳಗಾಗಿ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿದ್ದಾನೆ. ಸ್ವಲ್ಪ ಸಮಯದ ನಂತರ ಮನೆಯವರು ಬಾಲಕ ಸಾತ್ವಿಕಾಗಿ ಹುಡುಕಾಟ ನಡೆಸಿದ್ದಾರೆ ಎಲ್ಲಿಯೂ ಕಾಣದೇ ಇದ್ದಾಗ ಕೊಳವೆ ಬಾವಿ ಹತ್ತಿರ ಅನುಮಾನಗೊಂಡು ಅಲ್ಲಿ ಒಳಗೆ ಬ್ಯಾಟರಿ ಹಾಕಿ ನೋಡಿದಾಗ ಸಾತ್ವಿಕ್ ಇರುವುದು ಕುಟುಂಬಸ್ಥರಿಗೆ ಕಂಡು ಬಂದಿದೆ.
ತಕ್ಷಣ ಕುಟುಂಬಸ್ಥರು ಎಲ್ಲರಿಗೂ ಮಾಹಿತಿ ನೀಡಿದ್ದು ಘಟನೆಕ್ಕೆ ಇಂಡಿ ಗ್ರಾಮಾಂತರ ಪೊಲೀಸ್ ಠಾಣೆ ಎಚ್ ಡಿ ಆರ್ ಎಫ್ ತಂಡ ಹಾಗೂ ಅಗ್ನಿಶಾಮಕ ದಳ ತಂಡ ದೌಡಾರಿಸಿ ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ ಸತತವಾಗಿ ಬಾಲಕ ಸಾತ್ವಿಕ್ ರಕ್ಷಣೆಗಾಗಿ ಪಣ ತೊಟ್ಟಿದ್ದರು. ಅಲ್ಲದೆ ಇಂದು ಬೆಳಿಗ್ಗೆ ಹೈದರಾಬಾದ್ ನಿಂದ ಎನ್ ಡಿ ಆರ್ ಎಸ್ ತಂಡ ಕೂಡ ಎಂಟ್ರಿ ಕೊಟ್ಟಿದ್ದು ಇದೀಗ ಇವರೆಲ್ಲರ ಕಠಿಣ ಪರಿಶ್ರಮದಿಂದ ಬಾಲಕ ಸಾತ್ವಿಕ್ ಸಾವನ್ನೇ ಗೆದ್ದು ಬಂದಿದ್ದಾನೆ ತಕ್ಷಣ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವನಿಸಲಾಗಿದೆ ಎಂದು ತಿಳಿದುಬಂದಿದೆ.