ಉತ್ತರಪ್ರದೇಶ : ಉತ್ತರ ಪ್ರದೇಶದ ಲಕ್ನೊದಲ್ಲಿ 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ಗಣಿತ ಮತ್ತು ಜೀವಶಾಸ್ತ್ರ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ವಾಟ್ಸ್ ಅಪ್ ನಲ್ಲಿ ಲೀಕ್ ಆಗಿವೆ ಎಂಬ ಮಾಹಿತಿ ತಿಳಿದುಬಂದಿದೆ.ಪ್ರಾಂಶುಪಾಲ ಮಗನಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ಗುರುವಾರ ಸೆಕೆಂಡ್ ಶಿಫ್ಟ್ ನಲ್ಲಿ ಪರೀಕ್ಷೆಗಳು ಆರಂಭವಾದ ಒಂದು ಗಂಟೆಯ ನಂತರ ಆಗ್ರಾದ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಜನಾರ್ಧನ್ ರೆಡ್ಡಿ ‘ಬಿಜೆಪಿ’ಗೆ ಮರಳಿದರೆ ‘ಲೋಕಸಭಾ ಚುನಾವಣೆ’ಯಲ್ಲಿ ಒಗ್ಗಟ್ಟಿನಿಂದ ಹೋರಾಟ : ಶ್ರೀ ರಾಮುಲು
ಪ್ರೌಢ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಮತ್ತು ಪರೀಕ್ಷೆಗಳ ವೀಕ್ಷಕ ಮುಖೇಶ್ ಅಗರ್ವಾಲ್ ಪ್ರತಿಕ್ರಿಯಿಸಿ, ಶಿಕ್ಷಣ ಇಲಾಖೆಯು ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿದೆ.ಘಟನೆಯ ನಂತರ ನಾವು ಸಮಿತಿಯನ್ನು ರಚಿಸಿದ್ದೇವೆ ಮತ್ತು ಅದರ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಈ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಗರ್ವಾಲ್ ಹೇಳಿದರು.
ಯುಎಸ್ ಮೂನ್ ಲ್ಯಾಂಡರ್ ‘ಒಡಿಸ್ಸಿಯಸ್’ ಲ್ಯಾಂಡಿಂಗ್ ನ ಒಂದು ವಾರದ ನಂತರ ನಿಷ್ಕ್ರಿಯ
ಈ ಪ್ರಶ್ನೆ ಪತ್ರಿಕೆಗಳನ್ನು ಕಾಲೇಜು ಪ್ರಾಂಶುಪಾಲರೊಬ್ಬರ ಮಗ “ಆಲ್ ಪ್ರಿನ್ಸಿಪಲ್ಸ್ ಆಗ್ರಾ” ಎಂಬ ವಾಟ್ಸಾಪ್ ಗುಂಪಿನಲ್ಲಿ ಶೇರ್ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರನೆಪತ್ರಿಕೆ ಸೋರಿಗೆ ಸಂಬಂಧ ಆಗ್ರಾ ಶಾಲೆಗಳ ಜಿಲ್ಲಾ ನಿರೀಕ್ಷಕ ದಿನೇಶ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ಫತೇಪುರ್ ಸಿಕ್ರಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಕರ್ನಾಟಕದ ‘ಮಣ್ಣು’ ಕಂಡವರ ಪಾಲು : ‘ಅಕ್ರಮ’ ನಡೆಯುತ್ತಿದ್ದರು ‘ಕಣ್ಣುಮುಚ್ಚಿ’ ಕುಳಿತ ಅಧಿಕಾರಿಗಳು