ಹುಬ್ಬಳ್ಳಿ : ಒಂದು ಕಡೆ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಕುರಿತು ಭಾರಿ ಚರ್ಚೆ ಆಗುತ್ತಿದ್ದು, ಇನ್ನೊಂದು ಕಡೆ ಡಿಕೆ ಶಿವಕುಮಾರ್ ಅವರು ನಿನ್ನೆ ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ ಎಂದು ಪರೋಕ್ಷವಾಗಿ ಸಿಎಂ ಆಗುವ ಕುರಿತು ವಿರೋಧಿ ಬಣಗಳಿಗೆ ಟಾಂಗ್ ನೀಡಿದ್ದಾರೆ. ಇದರ ಮಧ್ಯ ಡಿ.ಕೆ.ಶಿವಕುಮಾರ್ ಇದೇ ಅವಧಿಯಲ್ಲಿ ಸಿಎಂ ಆಗ್ತಾರೆ ಎಂದು ಭೈರವಿ ಅಮ್ಮ ಸ್ಪೋಟಕ ಭವಿಷ್ಯ ಹೇಳಿದ್ದಾರೆ.
ನಗರದಲ್ಲಿರುವ ಸಿದ್ದರೂಢ ಮಠದ ಕಾರ್ಯಕ್ರಮದಲ್ಲಿ ಇಂದು ಭಾಗಿಯಾದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಅವರು, ನನ್ನ ಮಾತು ಯಾವತ್ತೂ ಸುಳ್ಳಾಗಲ್ಲ. ಇಲ್ಲಿಯತನಕ ಸುಳ್ಳಾಗಿಲ್ಲ, ಸುಳ್ಳು ಆಗೋದೂ ಇಲ್ಲ. ನಾನೂ ಮೂರು ವರ್ಷದ ಹಿಂದೆ ಡಿಕೆಶಿ ಮನೆಗೆ ಹೋಗಿದ್ದೆ. ಅವರು ನನ್ನ ಕರೆದಿದ್ರು.
ಮುಂದೆ ಏನಾಗುತ್ತೆ ಅಂತಾ ಕೇಳಿದ್ರು. ಏನು ಆಗಬೇಕು ಅಂತಾ ಕೇಳಿದೆ. ಮುಂದಿನ ಕಥೆ ಏನು ಅಂತಾ ಕೇಳಿದರು. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾ ಹೇಳಿದ್ದೆ. ನೀನು ದುಡಿದ ದುಡ್ಡು, ಇನ್ಯಾವನೋ ತಿಂದು ಗುಂಡಾಗ್ತಾನೆ ಅನ್ನೋದು ಅಷ್ಟೇ ಅದರರ್ಥ. ಸತ್ಯ ಆಯ್ತೋ ಇಲ್ಲವೋ ಎಂದು ಪ್ರಶ್ನಿಸಿದರು.
ನನಗೆ ಡಿಕೆಶಿ ಮೇಲಾಗಲೀ ಅಥವಾ ಸಿದ್ದರಾಮಯ್ಯ ಹಾಗೂ ಬಿಜೆಪಿ ಮೇಲಾಗಲೀ ಯಾವುದೇ ಅಭಿಮಾನವಿಲ್ಲ. ಸಿಎಂ ಬದಲಾವಣೆ ಅಲ್ಲ, ಆ ಸೀಟ್ನಲ್ಲಿ ಡಿಕೆಶಿನೇ ಕುಳಿತುಕೊಳ್ಳಬೇಕು. ಅಷ್ಟೆ ಅಲ್ಲದೇ ನಾನು ವಿನಯ್ ಕುಲಕರ್ಣಿ ಮನೆಗೆ ಹೋಗಿ ಶಾಸಕ ಆಗ್ತಾನೆ ಅಂದಿದ್ದೆ. ಶಾಸಕ ಆದ್ನೋ ಇಲ್ವೋ? ಎಂದು ಇದೇ ವೇಳೆ ಅವರು ಪ್ರಶ್ನಿಸಿದರು.