ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪಿಯುಸಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದ್ದು, ಸಾನಾ ಕಾಲೇಜಿನ ಹಾಸ್ಟೆಲ್ ನಲ್ಲಿ ಅಯಾನ್ ಸುಂಕದ ಎನ್ನುವ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಹುಬ್ಬಳ್ಳಿಯ ಭೈರಿದೇವರಕೊಪ್ಪ ಬಳಿ ಇರುವ ಕಾಲೇಜಿನಲ್ಲಿ ಮೃತದೇಹ ಪತ್ತೆಯಾಗಿದೆ.
ಹಾಸ್ಟೆಲ್ ಮೂರನೇ ಮಹಡಿಯೇ ಕೆಳಗೆ ಅಯಾನ್ ಶವ ಪತ್ತೆಯಾಗಿದೆ. ಸೈನ್ಸ್ ವಿಭಾಗದಲ್ಲಿ ಅಯಾನ್ ಸುಂಕದ ಓದುತ್ತಿದ್ದ. ಎಂದು ಹೇಳಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ಕಮಲೂರು ಮೂಲದ ಆಯಾನ್ ಸುಂಕದೆಂದು ತಿಳಿದು ಬಂದಿದ್ದು, ಆತನ ಮೃತ ದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.








