ಬೆಂಗಳೂರು : ಬೆಂಗಳೂರಿನಲ್ಲಿ ಸಿಸಿಬಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸಿಸಿಬಿಯಿಂದ 71 ಲಕ್ಷ ರೂ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಅಲ್ಲದೇ ಕೇರಳ ಮೂಲದ ಓರ್ವ ಆರೋಪಿ ಸೇರಿದಂತೆ ಇಬ್ಬರನ್ನು ಸಿಸಿಬಿ ಪೊಲೀಸ್ ಅರೆಸ್ಟ್ ಮಾಡಿದ್ದಾರೆ.
ಖಚಿತ ಮಾಹಿತಿಯನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಚಂದ್ರನಗರದಲ್ಲಿ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ದಾಳಿಯ ವೇಳೆ15.15 ಗ್ರಾಂ ಎಂಡಿಎಂಎ ಕ್ರಿಸ್ಟಲ್, 550 ಹೈಡ್ರೋ ಗಾಂಜಾ, 2 ಕೆಜಿ 273 ಗ್ರಾಂ ಗಾಂಜಾ, ತೂಕದ ಯಂತ್ರ ಮತ್ತು ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳದಿಂದ ಕಡಿಮೆ ಬೆಲೆಗೆ ಬಂಧಿತ ಆರೋಪಿಗಳು ತಂದಿದ್ದರು ಎನ್ನಲಾಗಿದೆ.
ಜೈಲಿನಲ್ಲಿರುವ ಮತ್ತೊಬ್ಬ ಆರೋಪಿ ಕೂಡ ಈ ಒಂದು ದಂದಧೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಹಾಗಾಗಿ ಜೈಲಿನಲ್ಲಿರುವ ಆರೋಪಿ ಫೋನಿನಲ್ಲಿ ಸಹಚರನಿಗೆ ಮಾಹಿತಿ ನೀಡುತ್ತಿದ್ದ ಆತನ ಸೂಚನೆಯ ಮೇರೆಗೆ ಪೋರ್ಟರ್ ಮೂಲಕ ಗಾಂಜಾ ಪೂರೈಕೆ ಮಾಡಲಾಗುತ್ತಿತ್ತು. ಆರೋಪಿಗಳನ್ನು ಬಂಧಿಸಿ ಸಿಸಿಬಿ ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದೆ.








