ಮುಂಬೈ : ಬಾಲಿವುಡ್ ನಟ ರಣವೀರ್ ಸಿಂಗ್ ನ್ಯೂಡ್ ಫೋಟೋಶೂಟ್ ಮಾಡಿಸಿಕೊಂಡು ಹಲವು ದಿನಗಳು ಕಳೆದಿವೆ. ಆದ್ರೆ, ಸಮಸ್ಯೆ ಮಾತ್ರ ನಿಲ್ಲುತ್ತಿಲ್ಲ. ನಿರಂತರ ಪ್ರತಿಭಟನೆಗಳು ಮತ್ತು ಟೀಕೆಗಳ ನಂತ್ರ ಇದೀಗ ಮುಂಬೈ ಪೊಲೀಸರು ರಣವೀರ್ ಸಿಂಗ್ʼಗೆ ನೋಟಿಸ್ ಕಳುಹಿಸಿದ್ದಾರೆ ಮತ್ತು ಆಗಸ್ಟ್ 22 ರಂದು ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಅದ್ರಂತೆ, ಆಗಸ್ಟ್ 22ರಂದು, ಮುಂಬೈ ಪೊಲೀಸರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಲು ರಣವೀರ್ ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ.
ಮೂಲಗಳ ಪ್ರಕಾರ, ಮುಂಬೈ ಪೊಲೀಸರ ತಂಡವೂ ರಣವೀರ್ ಸಿಂಗ್ ಅವರ ಮನೆಗೆ ನೋಟಿಸ್ ನೀಡಲು ಹೋಗಿದ್ದು, ಆಗ ಅವ್ರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ನಟನಿಗೆ ನೇರವಾಗಿ ನೋಟಿಸ್ ನೀಡಲು ಸಾಧ್ಯವಾಗಿಲಿಲ್ಲ. ಇದೀಗ ಪೊಲೀಸರು ಮತ್ತೊಮ್ಮೆ ನಟನ ಮನೆಗೆ ತೆರಳಿ ನೋಟಿಸ್ ನೀಡಲು ಪ್ರಯತ್ನಿಸಬೋದು ಅಥವಾ ಮೇಲ್ನಲ್ಲಿ ನೋಟಿಸ್ ಕಳುಹಿಸಬೋದು.