ನವದೆಹಲಿ : ಜುಲೈ 18ರಿಂದ ಜಾರಿಗೆ ಬಂದ ಬಾಡಿಗೆಯ ಮೇಲಿನ ಹೊಸ ಜಿಎಸ್ಟಿ ಅಥವಾ ಸರಕು ಮತ್ತು ಸೇವಾ ತೆರಿಗೆ ನಿಯಮಗಳ ಬಗ್ಗೆ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಪಿಐಬಿ, “ವಸತಿ ಘಟಕವನ್ನ ಬಾಡಿಗೆಗೆ ನೀಡಿದಾಗ ಮಾತ್ರ ಅದನ್ನ ವ್ಯಾಪಾರೋದ್ಯಮಕ್ಕೆ ಬಾಡಿಗೆಗೆ ನೀಡಿದಾಗ ಮಾತ್ರ ತೆರಿಗೆಗೆ ಒಳಪಡುತ್ತದೆ” ಎಂದು ಹೇಳಿದೆ. ಅದು ಬಿಟ್ಟು “ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗೆ ಬಾಡಿಗೆಗೆ ನೀಡಿದಾಗ ಜಿಎಸ್ಟಿ ಅನ್ವಯಿಸೋದಿಲ್ಲ; ಸಂಸ್ಥೆಯ ಮಾಲೀಕರು ಅಥವಾ ಪಾಲುದಾರರು ವೈಯಕ್ತಿಕ ಬಳಕೆಗಾಗಿ ಮನೆಯನ್ನು ಬಾಡಿಗೆಗೆ ಪಡೆದರೂ ಸಹ ಜಿಎಸ್ಟಿ ಇಲ್ಲ” ಎಂದು ಸ್ಪಷ್ಟನೆ ನೀಡಿದೆ.
ತೆರಿಗೆ ತಜ್ಞರ ಪ್ರಕಾರ, 2022ರ ಜುಲೈ 17ರವರೆಗೆ, ವಾಣಿಜ್ಯ ಆಸ್ತಿಯ ಬಾಡಿಗೆಗೆ ಜಿಎಸ್ಟಿ ಅನ್ವಯವಾಗುತ್ತಿತ್ತು. ಆದ್ರೆ, 2022ರ ಜುಲೈ 18ರಿಂದ, ಅಂತಹ ನಿವಾಸವನ್ನ ಜಿಎಸ್ಟಿ-ನೋಂದಾಯಿತ ವ್ಯಕ್ತಿ / ಘಟಕವು ಬಾಡಿಗೆಗೆ ಅಥವಾ ಗುತ್ತಿಗೆ ನೀಡಿದ್ದರೆ ಜಿಎಸ್ಟಿ ವಿಧಿಸಲಾಗುತ್ತದೆ. 47ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಶಿಫಾರಸು ಮಾಡಿದಂತೆ, ಬಾಡಿಗೆದಾರನು ರಿವರ್ಸ್ ಚಾರ್ಜ್ ಆಧಾರದ ಮೇಲೆ (RCM) ಶೇಕಡಾ 18ರಷ್ಟು ಜಿಎಸ್ಟಿ ಪಾವತಿಸಬೇಕು. ಆದಾಗ್ಯೂ, ಅವರು ಜಿಎಸ್ಟಿ ರಿಟರ್ನ್ಸ್ನಲ್ಲಿ ಮಾರಾಟದ ಮೇಲೆ ತೆರಿಗೆ ಪಾವತಿಸುವಾಗ ಈ ಮೌಲ್ಯವನ್ನು ಕಡಿತವಾಗಿ ಕ್ಲೇಮ್ ಮಾಡಬಹುದು.
ಡೆಲಾಯ್ಟ್ ಇಂಡಿಯಾದ ಪಾಲುದಾರ, ಪರೋಕ್ಷ ತೆರಿಗೆಯ ಪಾಲುದಾರ ಮಹೇಶ್ ಜೈಸಿಂಗ್, “ಜುಲೈ 17, 2022 ರವರೆಗೆ ಬಾಡಿಗೆದಾರರ ಸ್ಥಾನಮಾನವನ್ನು ಲೆಕ್ಕಿಸದೆ, ಅಂದರೆ ಸೇವಾ ಪೂರೈಕೆದಾರರು ಅಥವಾ ಸೇವಾ ಸ್ವೀಕರಿಸುವವರು ನೋಂದಾಯಿತರಾಗಿರಲಿ ಅಥವಾ ನೋಂದಾಯಿಸದೇ ಇರಲಿ, ವಸತಿ ಮನೆಗಳನ್ನು ಬಾಡಿಗೆಗೆ ನೀಡುವುದಕ್ಕೆ ವಿನಾಯಿತಿ ನೀಡಲಾಗಿದೆ. ಇದರರ್ಥ ವಸತಿ ಉದ್ದೇಶಗಳಿಗಾಗಿ ಆಸ್ತಿಯನ್ನು ಬಾಡಿಗೆಗೆ ನೀಡುವುದು ಎಲ್ಲರಿಗೂ ವಿನಾಯಿತಿಯಾಗಿದೆ. ಆದಾಗ್ಯೂ, ಜುಲೈ 18, 2022 ರಿಂದ, ಜಿಎಸ್ಟಿ-ನೋಂದಾಯಿತ ಬಾಡಿಗೆದಾರನು ರಿವರ್ಸ್ ಚಾರ್ಜ್ ಕಾರ್ಯವಿಧಾನದ ಅಡಿಯಲ್ಲಿ ವಸತಿ ಉದ್ದೇಶಗಳಿಗಾಗಿ ಬಾಡಿಗೆಗೆ ನೀಡುವ ಜಿಎಸ್ಟಿಗೆ ಬಾಧ್ಯಸ್ಥನಾಗುತ್ತಾನೆ.
ಬಾಡಿಗೆದಾರರಿಗೆ ಅನ್ವಯವಾಗುವ ಹೊಸ ಜಿಎಸ್ಟಿ ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಷಯಗಳು ಇಲ್ಲಿವೆ:
ಜಿಎಸ್ಟಿ ಅಡಿಯಲ್ಲಿ ನೋಂದಾಯಿತ ಬಾಡಿಗೆದಾರರು ಈಗ ವಾಣಿಜ್ಯ ಉದ್ದೇಶಗಳಿಗಾಗಿ ಆಸ್ತಿಯನ್ನು ಬಾಡಿಗೆಗೆ ನೀಡಲು ಶೇಕಡಾ 18 ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆಸ್ತಿ ಮಾಲೀಕರು ಜಿಎಸ್ಟಿ ಪಾವತಿಸಲು ಜವಾಬ್ದಾರರಾಗಿರುವುದಿಲ್ಲ.
ಬಾಡಿಗೆ ವಸತಿ ಆಸ್ತಿಯಿಂದ ಸೇವೆಗಳನ್ನು ಒದಗಿಸುವ ಬಾಡಿಗೆದಾರನು ಶೇಕಡಾ 18 ರಷ್ಟು ಜಿಎಸ್ಟಿ ತೆರಿಗೆಯನ್ನು ಪಾವತಿಸಲು ಬಾಧ್ಯಸ್ಥನಾಗಿರುತ್ತಾನೆ.
– ರಿವರ್ಸ್ ಚಾರ್ಜ್ ಮೆಕ್ಯಾನಿಸಂ (ಆರ್ಸಿಎಂ) ಅಡಿಯಲ್ಲಿ ಬಾಡಿಗೆದಾರನು ತೆರಿಗೆ ಪಾವತಿಸಲು ಬಾಧ್ಯಸ್ಥನಾಗಿರುತ್ತಾನೆ. ಬಾಡಿಗೆದಾರನು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅಡಿಯಲ್ಲಿ ಪಾವತಿಸಿದ ಜಿಎಸ್ಟಿಯನ್ನು ಕಡಿತವಾಗಿ ಕ್ಲೇಮ್ ಮಾಡಬಹುದು.
-ಜಿಎಸ್ಟಿ-ನೋಂದಾಯಿತ ಬಾಡಿಗೆದಾರರು ವ್ಯಕ್ತಿಗಳು ಮತ್ತು ಕಾರ್ಪೊರೇಟ್ ಘಟಕಗಳನ್ನು ಒಳಗೊಂಡಿದ್ದಾರೆ.
ಮಿತಿಗಿಂತ ಹೆಚ್ಚಿನ ವಾರ್ಷಿಕ ವಹಿವಾಟು ನಡೆಸುವ ವ್ಯವಹಾರ ಅಥವಾ ವೃತ್ತಿಯನ್ನು ನಡೆಸುವ ವ್ಯಕ್ತಿಗಳಿಗೆ ಜಿಎಸ್ಟಿ ನೋಂದಣಿ ಕಡ್ಡಾಯವಾಗಿದೆ.
– ಹೊಸ ಜಿಎಸ್ಟಿ ನಿಯಮವು ವಸತಿ ಆಸ್ತಿಗಳನ್ನು ಬಾಡಿಗೆಗೆ ಅಥವಾ ಗುತ್ತಿಗೆಗೆ ತೆಗೆದುಕೊಂಡ ಕಂಪನಿಗಳು ಮತ್ತು ವೃತ್ತಿಪರರ ಮೇಲೆ ಪರಿಣಾಮ ಬೀರುತ್ತದೆ.
– ಈ ಹಿಂದೆ, ಕಚೇರಿಗಳು ಅಥವಾ ಚಿಲ್ಲರೆ ಸ್ಥಳಗಳಂತಹ ವಾಣಿಜ್ಯ ಆಸ್ತಿಗಳನ್ನು ಮಾತ್ರ ಬಾಡಿಗೆಗೆ ನೀಡಲಾಗುತ್ತಿತ್ತು.