ಕೆಎನ್ಎನ್ಡಿಜಿಟಲ್ ಡೆಸ್ಕ್ : ಲೇಖಕ ಸಲ್ಮಾನ್ ರಶ್ದಿ ಅವ್ರು ಪಶ್ಚಿಮ ನ್ಯೂಯಾರ್ಕ್ʼನಲ್ಲಿ ಉಪನ್ಯಾಸ ನೀಡಲು ಹೊರಟಿದ್ದಾಗ ಅವರ ಮೇಲೆ ಶುಕ್ರವಾರ ಹಲ್ಲೆ ನಡೆಸಲಾಗಿದೆ ಎಂದು ಎಪಿ ವರದಿ ಮಾಡಿದೆ.
ಲೇಖಕ ಸಲ್ಮಾನ್ ರಶ್ದಿ ಅವರು ಪಶ್ಚಿಮ ನ್ಯೂಯಾರ್ಕ್ʼನಲ್ಲಿ ಉಪನ್ಯಾಸ ನೀಡಲು ಹೊರಟಿದ್ದಾಗ ಶುಕ್ರವಾರ ಚೂರಿಯಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಚೌಟೌಕ್ವಾ ಇನ್ಸ್ಟಿಟ್ಯೂಷನ್ʼನಲ್ಲಿ ಒಬ್ಬ ವ್ಯಕ್ತಿಯು ವೇದಿಕೆಗೆ ನುಗ್ಗಿ ಲೇಖಕನಿಗೆ ಚೂರಿಯಿಂದ ಇರಿದಿದ್ದಾನೆ ಎನ್ನಲಾಗ್ತಿದೆ. ಅಂದ್ಹಾಗೆ, ಅವರ ಬರವಣಿಗೆಯು 1980ರ ದಶಕದಲ್ಲಿ ಇರಾನ್ʼನಿಂದ ಕೊಲೆ ಬೆದರಿಕೆಗಳಿಗೆ ಕಾರಣವಾಯಿತು.
ರಶ್ದಿ ಅವರ ಮೇಲೆ ಹಲ್ಲೆ ನಡೆದ ನಂತರ ದಾಳಿಕೋರನನ್ನ ನಿಯಂತ್ರಿಸಲಾಗಿದೆ.
#SalmanRushdie just attacked onstage at @chq @NBCNews @ABC @cnnbrk pic.twitter.com/I1XT6AmkhK
— Charles Savenor (@CharlieSavenor) August 12, 2022
ಸಲ್ಮಾನ್ ರಶ್ದಿ ಅವರ ‘ದಿ ಸಟಾನಿಕ್ ವರ್ಸಸ್’ ಪುಸ್ತಕವನ್ನ ಇರಾನ್ನಲ್ಲಿ 1988 ರಿಂದ ನಿಷೇಧಿಸಲಾಗಿದೆ, ಏಕೆಂದರೆ ಅನೇಕ ಮುಸ್ಲಿಮರು ಇದನ್ನು ಧರ್ಮನಿಂದನೆ ಎಂದು ಪರಿಗಣಿಸುತ್ತಾರೆ.