ಬೆಂಗಳೂರು: ನಗರದಲ್ಲಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸಿದ್ಧಲಿಂಗೇಶ್ವರ ಥಿಯೇಟರ್ ಬಳಿ ಸ್ನೇಹಿತರ ನಡುವೆ ನಡೆದ ಗಲಾಟೆಯಲ್ಲಿ ಹತ್ಯೆಯಲ್ಲಿ ಅಂತ್ಯವಾಗಿದೆ.
BIGG NEWS: ಸಿದ್ರಾಮುಲ್ಲಾ ಖಾನ್ ಎಂದಿದ್ದಕ್ಕೆ ನನಗೇನು ಬೇಸರವಿಲ್ಲ; ಸಿದ್ದರಾಮಯ್ಯ
25 ವರ್ಷದ ಬಸವರಾಜ್ ಎಂಬಾತನನ್ನು ಕತ್ತು ಸೀಳಿ ಆತನ ಸ್ನೇಹಿತ ಅಭಿಜಿತ್ ಕೊಲೆಗೈದಿದ್ದಾನೆ.ಪರಸ್ಪರ ಗಲಾಟೆ ಮಾಡಿಕೊಂಡು ಈ ಹಿಂದೆ ಒಮ್ಮೆ ಠಾಣೆ ಮೆಟ್ಟಿಲೇರಿದ್ದ ಅಭಿಜಿತ್, ಬಸವರಾಜ್ ಹಾಗೂ ಯಶವಂತ್ ಎಂಬಾತನನ್ನು ಪೊಲೀಸರು ಸಮಾಧಾನಗೊಳಿಸಿ ಕಳಿಸಿದ್ದರು. ತಡರಾತ್ರಿ ಬಸವರಾಜ್ ಹಾಗೂ ಅಭಿಜಿತ್ ಮದ್ಯಪಾನ ಮಾಡಿದ್ದು, ಬಳಿಕ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಕೋಪದಲ್ಲಿ ಆರೋಪಿಯು ತನ್ನ ಸ್ನೇಹಿತ ಬಸವರಾಜ್ನ ಕತ್ತು ಸೀಳಿ ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ.