ಬೆಂಗಳೂರು : ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಚಿವ, ಎಚ್. ಡಿ. ರೇವಣ್ಣ ಸಲ್ಲಿಸಿರುವ ಅರ್ಜಿಯ ಸಂಬಂಧ ವಿಶೇಷ ನ್ಯಾಯಾಲಯ ನ್ಯಾಯಲಯವು ಇಂದು ಅರ್ಜಿ ವಿಚಾರಣೆ ನಡೆಸಿತು.
ಇದೇ ವೇಳೆ ಹೆಚ್.ಡಿ ರೇವಣ್ಣ ನ್ಯಾಯಾಲಯಕ್ಕೆ ಸಲ್ಲಿಸದಿ ಅರ್ಜಿಯನ್ನು ವಾಪಸ್ಸು ಪಡೆದುಕೊಂಡಿದ್ದಾರೆ.
ಅರ್ಜಿ ಕುರಿತಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.ಎಸ್ಐಡಿ ಪರ ಎಸ್‌ಪಿಬಿ ಬ್ಯಾತ ಎನ್ ಜಗದೀಶ್ ಅವರು ವಾದ ಮಂಡಿಸಿದ್ದು, ಎಚ್ ಡಿ ರೇವಣ್ಣ ವಿರುದ್ಧ ಅತ್ಯಾಚಾರದ ಆರೋಪ ಸೇರಿಸಿಲ್ಲ ತಿಳಿಸಿದರು. ಅತ್ಯಾಚಾರದ ಆರೋಪ ಇಲ್ಲದಿರುವುದರಿಂದ ನಿರೀಕ್ಷಣ ಜಾಮೀನು ಅಗತ್ಯವಿಲ್ಲ ಆದರೆ ಜಾಮೀನು ನೀಡಬಹುದಾದ ಆರೋಪಗಳು ಮಾತ್ರವಿದೆ ಎಂದರು. ಹೀಗಾಗಿ ನಿರೀಕ್ಷಣಾ ಜಾಮೀನು ಅರ್ಜಿ ಊರ್ಜಿತವಲ್ಲ.ಈ ದಿನದವರೆಗೆ ಜಾಮೀನು ರಹಿತ ಪ್ರಕರಣ ದಾಖಲಿಸಿಲ್ಲ. ಹೈಕೋರ್ಟಿಗೆ ಎಸ್ಪಿಪಿ ನೀಡಿದ ಮಾಹಿತಿ ದಾಖಲಿಸಿಕೊಂಡ ಕೋರ್ಟ್. ಹಾಗಾಗಿ ಎಸ್ಐಟಿ ಹೇಳಿಕೆ ಹಿನ್ನೆಲೆಯಲ್ಲಿ ಇದೀಗ ಎಚ್ ಡಿ ರೇವಣ್ಣ ಅರ್ಜಿ ವಾಪಸ್ ಪಡೆದುಕೊಂಡಿದ್ದಾರೆ.