ಕೆಎನ್ಎನ್ಡಿಜಿಟಲ್ ಡೆಸ್ಕ್ : ಮೆದುಳಿನ ಕಸರತ್ತುಗಳ ಒಗಟುಗಳನ್ನ ಪರಿಹರಿಸಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಇವುಗಳನ್ನ ಪರಿಹರಿಸುವ ಸಂಭ್ರಮವೇ ಅಂಥದ್ದು. ಆದರೆ ಒಂದೊಮ್ಮೆ ಇಂತಹ ಒಗಟುಗಳು ಸಂಡೇ ಮ್ಯಾಗಜೀನ್ಗಳಿಗೆ ಸೀಮಿತವಾಗಿದ್ದವು. ಆದ್ರೆ, ಸೋಷಿಯಲ್ ಮೀಡಿಯಾ ಲಭ್ಯವಾದಾಗಿನಿಂದ ಇಂತಹ ಒಗಟುಗಳು ಸದ್ದು ಮಾಡುತ್ತಿವೆ. ಇತ್ತೀಚಿನವರೆಗೂ ಆಪ್ಟಿಕಲ್ ಇಲ್ಯೂಷನ್ ಗೆ ಸಂಬಂಧಿಸಿದ ಫೋಟೋಗಳು ಆಕರ್ಷಕವಾಗಿದ್ದು, ಈಗ ಬ್ರೈನ್ ಟೀಸರ್ ಫೋಟೋಗಳು ಸದ್ದು ಮಾಡುತ್ತಿವೆ. ಇತ್ತೀಚೆಗಷ್ಟೇ ಈ ರೀತಿಯ ಫೋಟೋವೊಂದು ನೆಟ್ಟಿಗರನ್ನು ಆಕರ್ಷಿಸುತ್ತಿದೆ.

ಮೇಲಿನ ಫೋಟೋದಲ್ಲಿ, ಮೂರು ಜನರು ಕುರ್ಚಿಗಳ ಮೇಲೆ ಕುಳಿತಿದ್ದಾರೆ. ಇನ್ನು ಪಕ್ಕದ ಕೋಣೆಯಲ್ಲಿ ನಾಯಿ ಇದೆ. ಆದ್ರೆ, ನಾಯಿಯನ್ನ ಕೋಣೆಗೆ ಬಿಡದ ಕಾರಣ ಮಾಲೀಕರು ಅದನ್ನ ಹೊರಗೆ ಬಿಟ್ಟು ಒಳಗೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಾಯಿ ತನ್ನ ಯಜಮಾನ ಬರವುದನ್ನ ಕಾಯುತ್ತಿದೆ. ಹಾಗಿದ್ರೆ, ಆ ಮೂವರಲ್ಲಿ, ನಾಯಿಯ ಮಾಲೀಕರು ಯಾರು.?

 

ಇದರ ಸುಳಿವು ಕೂಡ ಇದ್ದು, ಆ ಸುಳಿವನ್ನ ಆಧರಿಸಿ ಮಾಲೀಕರನ್ನು ಗುರುತಿಸುವುದು ಈ ಬ್ರೈನ್ ಟೀಸರ್ ಉದ್ದೇಶವಾಗಿದೆ. ಮೂವರ ಬಲಭಾಗದಲ್ಲಿರುವ ಮೊದಲ ವ್ಯಕ್ತಿ ನಾಯಿಯ ಬಗ್ಗೆ ಪುಸ್ತಕವನ್ನ ಓದುತ್ತಿದ್ದಾನೆ, ಆದ್ದರಿಂದ ಅವನು ಮಾಲೀಕನೆಂದು ತೋರುತ್ತಿದೆ! ಆದರೆ ಅದು ತಪ್ಪು. ಮಧ್ಯದಲ್ಲಿ ಕುಳಿತ ವ್ಯಕ್ತಿಯೇ ನಾಯಿಯ ಒಡೆಯ. ಅವನ ಕೆಳಗೆ ಹಸಿರು ಬಣ್ಣದ ಹಗ್ಗವಿದೆ ಅನ್ನೋದನ್ನ ಗಮನಿಸಬೋದು. ಹಗ್ಗವು ನಾಯಿಯ ಕಾಂಡದ ಮೇಲಿನ ಬೆಲ್ಟ್’ನ ಬಣ್ಣವನ್ನ ಹೋಲುತ್ತದೆ. ಇದರರ್ಥ ನಾಯಿ ಮಧ್ಯದಲ್ಲಿ ಕುಳಿತಿರುವ ವ್ಯಕ್ತಿಯದ್ದು.

 

BREAKING NEWS : ಕೇರಳದ ಕೊಟ್ಟಾಯಂನ 2 ಗ್ರಾಮಗಳಲ್ಲಿ ಹಕ್ಕಿಜ್ವರ ಪತ್ತೆ : 8000 ಕೋಳಿಗಳನ್ನು ಕೊಲ್ಲಲು ಅಧಿಕಾರಿಗಳ ಆದೇಶ | bird flu

ಶಿವಮೊಗ್ಗ: ಡಿ.15ರ ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Share.
Exit mobile version